ದೇಶ

ಜಿಡಿಪಿ ಬೆಳವಣಿಗೆ ಮುನ್ನೋಟ ಶೇ.7 ಕ್ಕೆ ಇಳಿಕೆ, ಕ್ಷೀಣಿಸಿದ ಜಾಗತಿಕ ಬೇಡಿಕೆ, ಹಣದುಬ್ಬರ ಅತಿ ದೊಡ್ಡ ಸವಾಲು! 

ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ಶೇ.7.0 ರಷ್ಟಿರಲಿದೆ ಎಂದು ಶುಕ್ರವಾರ (ಜ.06) ರಂದು ಬಿಡುಗಡೆಯಾದ ಅಂದಾಜಿನಲ್ಲಿ ತಿಳಿದುಬಂದಿದೆ.

ಜಿಡಿಪಿ ಬೆಳವಣಿಗೆ ಮುನ್ನೋಟ ಶೇ.7 ಕ್ಕೆ ಇಳಿಕೆ, ಕ್ಷೀಣಿಸಿದ ಜಾಗತಿಕ ಬೇಡಿಕೆ, ಹಣದುಬ್ಬರ ಅತಿ ದೊಡ್ಡ ಸವಾಲು! 
ಜಿಡಿಪಿ ಬೆಳವಣಿಗೆ (ಸಂಗ್ರಹ ಚಿತ್ರ)
Published On :

ಮುಂಬೈ: ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ಶೇ.7.0 ರಷ್ಟಿರಲಿದೆ ಎಂದು ಶುಕ್ರವಾರ (ಜ.06) ರಂದು ಬಿಡುಗಡೆಯಾದ ಅಂದಾಜಿನಲ್ಲಿ ತಿಳಿದುಬಂದಿದೆ.

ಜಾಗತಿಕವಾಗಿ ಕುಸಿದ ಬೇಡಿಕೆ ಹಾಗೂ ಹೆಚ್ಚು ಹಣದುಬ್ಬರಗಳು ವಿಶ್ವದ 5 ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಮಾ.31ಕ್ಕೆ ಅಂತ್ಯಗೊಳ್ಳುವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ರಾಷ್ಟ್ರೀಯ ಅಂಕಿ-ಅಂಶ ಮುನ್ನೋಟ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಭಾರತವನ್ನು ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಹೊಂದಿರುವ ರಾಷ್ಟ್ರ ಎಂದು ಹೇಳಿದೆ.

ಕೊರೋನಾ ಪ್ಯಾಂಡಮಿಕ್ ಬಳಿಕ ಭಾರತದ ಆರ್ಥಿಕತೆ ಬೇಗ ಪುಟಿದೆದ್ದಿದ್ದು, ಈಗ ಜಾಗತಿಕವಾಗಿ ಪರಿಣಾಮ ಉಂಟುಮಾಡುತ್ತಿರುವ ಅಂಶಗಳಿಂದ ಸೆಣೆಸುತ್ತಿದೆ. 

ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ದೇಶದ 1.4 ಬಿಲಿಯನ್ ಮಂದಿಯ ಮೇಲೆ ಆಗಿದ್ದು, ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆಯಿಂದ ಜನತೆ ಜರ್ಝರಿತರಾಗಿದ್ದಾರೆ. ಇನ್ನು ಆರ್ ಬಿಐ ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ರೆಪೋ ದರವನ್ನು ಶೇ.2.25 ರಷ್ಟಕ್ಕೆ ಏರಿಕೆ ಮಾಡಿದೆ.

ಬೇರೆಡೆಗೆ ಹೋಲಿಕೆ ಮಾಡಿದರೆ ಭಾರತ ಜಾಗತಿಕ ಆರ್ಥಿಕತೆಯಲ್ಲಿ ಆಶಾಕಿರಣವಾಗಿದೆ. ಜಿಡಿಪಿ ಬೆಳವಣಿಗೆ ಡೇಟಾ ಬಿಡುಗಡೆಗೆ ಮುನ್ನ ಭಾರತದ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮುಂಬೈ ನಲ್ಲಿ ಶೇ.0.75 ರಷ್ಟು ಕಡಿಮೆಯಲ್ಲಿ ಅಂತ್ಯಗೊಂಡಿತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.