ದೇಶ

ಅಮೇರಿಕಾ ಭೇಟಿಗೆ ಪ್ರಧಾನಿ ಮೋದಿಗೆ ಅಧ್ಯಕ್ಷ ಜೋ ಬೈಡನ್ ಆಹ್ವಾನ

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಗೆ ಅಮೇರಿಕಾ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಪಿಟಿಐ ವರದಿ ಪ್ರಕಟಿಸಿದೆ.

ಅಮೇರಿಕಾ ಭೇಟಿಗೆ ಪ್ರಧಾನಿ ಮೋದಿಗೆ ಅಧ್ಯಕ್ಷ ಜೋ ಬೈಡನ್ ಆಹ್ವಾನ
ಜೋ ಬೈಡನ್-ಪ್ರಧಾನಿ ಮೋದಿ
Published On :

ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಗೆ ಅಮೇರಿಕಾ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಪಿಟಿಐ ವರದಿ ಪ್ರಕಟಿಸಿದೆ. 

ತಾತ್ವಿಕವಾಗಿ ಆಹ್ವಾನಕ್ಕೆ ಒಪ್ಪಿಗೆ ಸಿಕ್ಕಿದ್ದು ಉಭಯ ದೇಶಗಳ ಅಧಿಕಾರಿಗಳು ಸೂಕ್ತ ದಿನಾಂಕವನ್ನು ನಿರ್ಧರಿಸುವತ್ತ ಕೆಲಸ ಮಾಡುತ್ತಿದ್ದಾರೆ. 

ಜಿ-20 ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದ್ದು, ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಇತರ ರಾಷ್ಟ್ರಗಳ ನಾಯಕರೊಂದಿಗೆ ಬೈಡನ್ ಸಹ ಭಾಗವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅಂದರೆ ಜುಲೈ ಹಾಗೂ ಜೂನ್ ನಲ್ಲಿ ಉಭಯ ನಾಯಕರ ಭೇಟಿಗೆ ಅಧಿಕಾರಿಗಳು ದಿನಾಂಕವನ್ನು ಹುಡುಕುತ್ತಿದ್ದಾರೆ.

ಬೈಡನ್ ಈ ಆಹ್ವಾನವನ್ನು ಪ್ರಧಾನಿ ಮೋದಿಗೆ ಯಾವಾಗ ನೀಡಿದರು ಬೈಡನ್ ಆಹ್ವಾನವನ್ನು ಪ್ರಧಾನಿ ಕಚೇರಿಗೆ ಯಾರು ತಲುಪಿಸಿದರು? ಎಂಬ ಮುಂತಾದ ಮಾಹಿತಿಗಳನ್ನು ಸೂಕ್ಷ್ಮವಾದ ಕಾರಣಗಳಿಂದಾಗಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಡಿಸೆಂಬರ್ ನಲ್ಲಿ ಬೈಡನ್ ಫ್ರಾನ್ಸ್ ನ ಅಧ್ಯಕ್ಷ ಎಮಾನುಯಲ್ ಮಾಕ್ರಾನ್ ಅವರಿಗೆ  ಔತಣ ಕೂಟ ಏರ್ಪಡಿಸಿದ್ದರು. ಈಗ ಜಗತ್ತಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಮುಂಚೂಣಿಯ ಆರ್ಥಿಕತೆಗಳಾಗಿರುವ ಭಾರತ- ಅಮೇರಿಕಾದ ಪಾಲುದಾರಿಕೆ ಅತ್ಯಗತ್ಯವಾಗಿದೆ ಎಂದು ಬೈಡನ್ ನಂಬಿದ್ದಾರೆಂದು ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.