ದೇಶ

ಪಲಾಮು ಡಿಸಿ-ಎಸ್ಪಿ ಕಚೇರಿಯ ಇಬ್ಬರು ಚಾಲಕರಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಬಂಧನ

ಜಾರ್ಖಂಡ್‌ನ ಪಲಾಮು ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಿಲ್ಲೆಯ ಡಿಸಿ ಮತ್ತು ಎಸ್‌ಪಿ ಕಚೇರಿಯ ಇಬ್ಬರು ಚಾಲಕರನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆಯನ್ನು ಪಲಮು ಗ್ರಾಮದವಳು ಎಂದು ತಿಳಿದುಬಂದಿದೆ.

ಪಲಾಮು ಡಿಸಿ-ಎಸ್ಪಿ ಕಚೇರಿಯ ಇಬ್ಬರು ಚಾಲಕರಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳ ಬಂಧನ
ಸಂಗ್ರಹ ಚಿತ್ರ
Published On :

ರಾಂಚಿ: ಜಾರ್ಖಂಡ್‌ನ ಪಲಾಮು ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಿಲ್ಲೆಯ ಡಿಸಿ ಮತ್ತು ಎಸ್‌ಪಿ ಕಚೇರಿಯ ಇಬ್ಬರು ಚಾಲಕರನ್ನು ಬಂಧಿಸಲಾಗಿದೆ. ಸಂತ್ರಸ್ತ ಮಹಿಳೆಯನ್ನು ಪಲಮು ಗ್ರಾಮದವಳು ಎಂದು ತಿಳಿದುಬಂದಿದೆ.

ಸಂತ್ರಸ್ತ ಮಹಿಳೆ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಮೇದಿನಿನಗರಕ್ಕೆ ಬಂದಿದ್ದಳು. ಬ್ಯಾಲೆನ್ಸ್ ಖಾಲಿಯಾಗಿದ್ದರಿಂದ ಮೊಬೈಲ್ ರಿಚಾರ್ಜ್ ಮಾಡಲು ಅಂಗಡಿ ಹುಡುಕುತ್ತಿದ್ದಳು. ಈ ಸಮಯದಲ್ಲಿ ಆಕೆ ಚಾಲಕನನ್ನು ಭೇಟಿಯಾಗಿದ್ದಳು. ಮಹಿಳೆಯಿಂದ ಹಣ ಪಡೆದು ಮೊಬೈಲ್ ರೀಚಾರ್ಜ್ ಮಾಡಿದ್ದಾನೆ.

ಮಹಿಳೆಗೆ ಸಹಾಯ ಮಾಡುವ ಹೆಸರಲ್ಲಿ ಚಾಲಕ ಆಕೆಯನ್ನು ಹೌಸಿಂಗ್ ಕಾಲೋನಿಯಲ್ಲಿರುವ ತನ್ನ ಕ್ವಾರ್ಟರ್ಸ್‌ಗೆ ಕರೆದೊಯ್ದು ತನ್ನ ಸಹಚರರೊಬ್ಬರ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ತಪ್ಪಿಸಿಕೊಂಡು ಬಂದು ಮೇದಿನಿನಗರ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಡಿಸಿ ಮತ್ತು ಎಸ್ಪಿ ಕಚೇರಿಯ ಚಾಲಕರಾದ ಧರ್ಮೇಂದ್ರ ಮತ್ತು ಪ್ರಕಾಶ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಆರೋಪಿಗಳಿಬ್ಬರನ್ನೂ ಜೈಲಿಗೆ ಕಳುಹಿಸಲು ಸಿದ್ಧತೆ ನಡೆದಿದೆ.

ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ ಎಂದು ಪಲಾಮು ಎಸ್ಪಿ ರಿಷ್ಮಾ ರಮೇಶನ್ ತಿಳಿಸಿದ್ದಾರೆ. ತಂತ್ರಾಂಶದ ಸಹಾಯದಿಂದ ಅವರ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಲಾಗಿದೆ. ಮೂವರ ಮೊಬೈಲ್ ಲೊಕೇಶನ್ ಒಂದೇ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.