ಸಾವಿರ ಇಲಿಗಳನ್ನು ಕೊಂದ ಬೆಕ್ಕೊಂದು ಹಜ್‌ಗೆ ಹೋದಂತೆ: ರಾಹುಲ್ ಗಾಂಧಿ 'ಭಾರತ್ ಜೋಡೊ' ಯಾತ್ರೆ ಬಗ್ಗೆ ಕವಿತಾ ಲೇವಡಿ!
ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್ ಯಾತ್ರೆಗೆ ಹೋದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಎಂದು ಬಿಆರ್‌ಎಸ್ ಪಕ್ಷದ ನಾಯಕಿ ಕವಿತಾ ಅವರು ಟೀಕಿಸಿದ್ದಾರೆ.

ಹೈದರಾಬಾದ್: ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್ ಯಾತ್ರೆಗೆ ಹೋದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಎಂದು ಬಿಆರ್‌ಎಸ್ ಪಕ್ಷದ ನಾಯಕಿ ಕವಿತಾ ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ 62 ವರ್ಷ ದೇಶವನ್ನು ಆಳಿತು. ಗರೀಬಿ ಹಠಾವೋ ಘೋಷಣೆಯ ಹೊರತಾಗಿಯೂ ಬಡವರು ಬಡವರಾಗಿಯೇ ಉಳಿದರು ಎಂದು ಹೇಳಿದರು. 2024ರ ಲೋಸಕಭೆ ಚುನಾವಣೆಯಲ್ಲಿ ನಿಜಾಮಾಬಾದ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಕ್ಷೇತ್ರಕ್ಕೆ ಅವರ ಮೊದಲ ಭೇಟಿ ಇದಾಗಿದೆ.
ನಿಜಾಮಾಬಾದ್‌ಗೆ ಬಂದ ಅವರನ್ನು ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ರಾಹುಲ್ ಗಾಂಧಿ ಕಾಲ್ನಡಿಗೆ ಯಾತ್ರೆ ಮಾಡಿದರು. ಅದು ನನಗೆ ಹೇಗನ್ನಿಸಿತ್ತು ಗೊತ್ತಾ? ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್ ಯಾತ್ರೆ ಮಾಡಿದಂತೆ’ ಎಂದು ವ್ಯಂಗ್ಯವಾಡಿದರು.
ದೇಶ ಸ್ವಾತಂತ್ರ್ಯ ಪಡೆದ ಬಳಿಕ ಕಾಂಗ್ರೆಸ್ ಪಕ್ಷವು 62 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಅವರು ಮುಸ್ಲಿಮರಿಗೆ ಮಾಡಿದ್ದೇನು? ಗರೀಬಿ ಹಠಾವೋ ಎಂದು ಹೇಳಿದರಷ್ಟೇ. ಬಡವರಿಗೆ ಮಾಡಿದ್ದೇನು? ಬಡವರನ್ನು ಇಲ್ಲವಾಗಿಸಿದಿರಿ. ಆದರೆ ಬಡವತನವನ್ನಲ್ಲ ಎಂದು ಹರಿಹಾಯ್ದರು.
ಅಲ್ಲದೆ ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಕ್ಷೇತ್ರದಲ್ಲಿರುವ ಪ್ರತಿ ಮನೆ ಹಾಗೂ ಮಸೀದಿಗೆ ತೆರಳಿ ಮೌಲಾನಗಳನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಮತ ಹಾಕದಂತೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿ ಉಂಟು ಮಾಡಿದ ಕ್ರಾಂತಿಯನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅಲ್ಪಸಂಖ್ಯಾತ ಸಹೋದರ, ಸಹೋದರಿಯರು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


