20 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಚಲನಚಿತ್ರ ಪ್ರದರ್ಶನ
ಹಿಂಸಾಚಾರದಿಂದ ಸುದ್ದಿಯಾಗಿದ್ದ ಮಣಿಪುರದಲ್ಲಿ ಬರೊಬ್ಬರಿ 20 ವರ್ಷಗಳ ಬಳಿಕ ಹಿಂದಿ ಚಲನಚಿತ್ರವೊಂದು ಸ್ವಾತಂತ್ರ್ಯ ದಿನದಂದು ಪ್ರದರ್ಶನಗೊಳ್ಳುತ್ತಿದೆ.

ಇಂಫಾಲ: ಹಿಂಸಾಚಾರದಿಂದ ಸುದ್ದಿಯಾಗಿದ್ದ ಮಣಿಪುರದಲ್ಲಿ ಬರೊಬ್ಬರಿ 20 ವರ್ಷಗಳ ಬಳಿಕ ಹಿಂದಿ ಚಲನಚಿತ್ರವೊಂದು ಸ್ವಾತಂತ್ರ್ಯ ದಿನದಂದು ಪ್ರದರ್ಶನಗೊಳ್ಳುತ್ತಿದೆ.
ಬುಡಕಟ್ಟು ಸಂಘಟನೆ ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಚ್‌ಎಸ್‌ಎ) ಮಂಗಳವಾರ ಸಂಜೆ ಚುರಾಚಂದ್‌ಪುರ ಜಿಲ್ಲೆಯ ರೆಂಗ್‌ಕೈ (ಲಂಕಾ) ನಲ್ಲಿ ಹಿಂದಿ ಚಲನಚಿತ್ರವನ್ನು ಪ್ರದರ್ಶಿಸಲು ಯೋಜಿಸಿದೆ. ಆದರೆ ಯಾವ ಸಿನಿಮಾ ಎಂದು ಹೆಸರು ಬಹಿರಂಗಪಡಿಸಿಲ್ಲ. ಇದೇ ವಿಚಾರವಾಗಿ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದ ಎಚ್‌ಎಸ್‌ಎ 'ಇದು ದಶಕಗಳಿಂದ ಬುಡಕಟ್ಟು ಜನಾಂಗದವರನ್ನು ವಶಪಡಿಸಿಕೊಂಡಿರುವ ಭಯೋತ್ಪಾದಕ ಗುಂಪುಗಳಿಗೆ ನಮ್ಮ ಪ್ರತಿಭಟನೆ ಮತ್ತು ವಿರೋಧವನ್ನು ತೋರಿಸುವುದಾಗಿದೆ. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸಲು ಪ್ರತಿಜ್ಞೆ ತೆಗೆದುಕೊಳ್ಳುವಲ್ಲಿ ನಮ್ಮೊಂದಿಗೆ ಸೇರಿ" ಎಂದು ಅದು ಕರೆ ನೀಡಿದೆ.
ಮಣಿಪುರದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾದ ಕೊನೆಯ ಹಿಂದಿ ಚಲನಚಿತ್ರವೆಂದರೆ 1998 ರಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ಕುಚ್ ಕುಚ್ ಹೋತಾ ಹೈ ಎಂದು HSA ಹೇಳಿದೆ.
"ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ದೇಶವಿರೋಧಿ ಭಯೋತ್ಪಾದಕ ಗುಂಪುಗಳಿಂದ ನಾವು ನಮ್ಮ ಸ್ವಾತಂತ್ರ್ಯವನ್ನು ಘೋಷಿಸುತ್ತೇವೆ. ಮಣಿಪುರದಲ್ಲಿ ಹಿಂದಿ ಚಲನಚಿತ್ರಗಳ ಪ್ರದರ್ಶನದ ಮೇಲೆ ನಿಷೇಧವನ್ನು ಸೆಪ್ಟೆಂಬರ್ 2000 ರಲ್ಲಿ ಬಂಡಾಯ ಸಂಘಟನೆ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ವಿಧಿಸಿತು. ಸೆಪ್ಟೆಂಬರ್ 12 ರಂದು ನಿಷೇಧ ಹೇರಿದ ಒಂದು ವಾರದೊಳಗೆ ಬಂಡುಕೋರರು ರಾಜ್ಯದ ಕ್ಯಾಸೆಟ್ ಅಂಗಡಿಗಳ ಮೇಲೆ ದಾಳಿ ಮಾಡಿ ಸಂಗ್ರಹಿಸಿದ ಹಿಂದಿ ಭಾಷೆಯ 6,000 ರಿಂದ 8,000 ವಿಡಿಯೋ ಮತ್ತು ಆಡಿಯೊ ಕ್ಯಾಸೆಟ್‌ಗಳು ಮತ್ತು ಕಾಂಪ್ಯಾಕ್ಟ್ ಡಿಸ್ಕ್‌ಗಳನ್ನು ಸುಟ್ಟುಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ನಿಷೇಧಕ್ಕೆ RPF ಯಾವುದೇ ಕಾರಣವನ್ನು ನೀಡದಿದ್ದರೂ, ಕೇಬಲ್ ಆಪರೇಟರ್‌ಗಳು ಉಗ್ರಗಾಮಿ ಗುಂಪು ರಾಜ್ಯದ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬಾಲಿವುಡ್‌ನಿಂದ ನಕಾರಾತ್ಮಕ ಪರಿಣಾಮ ಬೀರುವ ಭಯವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


