ಉತ್ತರ ಪ್ರದೇಶ: ಇಬ್ಬರು ಬಾಲಕರಿಗೆ ಮೂತ್ರ ಕುಡಿಸಿ, ಗುದದ್ವಾರಕ್ಕೆ ಮೆಣಸಿಕಾಯಿ ತುರುಕಿ ವಿಕೃತಿ
ಇಬ್ಬರು ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ ಗುದದ್ವಾರದಲ್ಲಿ ಹಸಿ ಮೆಣಸಿನಕಾಯಿ ತುರುಕಿ, ಪತ್ತೆ ಮಾಡಲು ಸಾಧ್ಯವಾಗದಂತಹ ಚುಚ್ಚು ಮದ್ದನ್ನು ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ವರದಿಯಾಗಿದೆ.

ಲಖನೌ: ಇಬ್ಬರು ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ ಗುದದ್ವಾರದಲ್ಲಿ ಹಸಿ ಮೆಣಸಿನಕಾಯಿ ತುರುಕಿ, ಪತ್ತೆ ಮಾಡಲು ಸಾಧ್ಯವಾಗದಂತಹ ಚುಚ್ಚು ಮದ್ದನ್ನು ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ವರದಿಯಾಗಿದೆ.
10-15 ವರ್ಷದ ಇಬ್ಬರು ಬಾಲಕರ ವಿರುದ್ಧ ಕಳ್ಳತನದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ರೀತಿ ಅವರನ್ನು ಹಿಂಸಿಸಲಾಗಿದೆ.
ಮೂತ್ರ ಕುಡಿಯುವಂತೆ, ಹಸಿರು ಮೆಣಸಿನಕಾಯಿ ತಿನ್ನುವಂತೆ ಒತ್ತಾಯಿಸುತ್ತಿರುವ ವೀಡಿಯೋ ವೈರಲ್ ಆಗತೊಡಗಿದ್ದು, ಬಾಲಕರಿಗೆ ಬೆದರಿಕೆ ಹಾಕುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಯುಪಿ RSS ಕಚೇರಿ ಗೇಟ್ ಬಳಿ ಮೂತ್ರ ವಿಸರ್ಜನೆ: 3 ಬಂಧನ
ಹಣ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಾಲಕರನ್ನು ಕಟ್ಟಿ ಹಾಕಿ ಈ ರೀತಿ ಹಿಂಸಿಸಲಾಗಿದೆ. ಆ.04 ರಂದು ಈ ವೀಡಿಯೋವನ್ನು ಚಿತ್ರೀಕರಿಸಲಾಗಿದ್ದು, ಜಿಲ್ಲೆಯ ಪತ್ರಾ ಬಜಾರ್ ಪೊಲೀಸ್ ಠಾಣೆಯ ಕೊಂಕಟಿ ಚೌರಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


