ಆಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ: ದೆಹಲಿ-ಎನ್ಸಿಆರ್, ಚಂಡೀಗಢ, ಪಂಜಾಬ್ನಲ್ಲೂ ನಡುಗಿದ ಭೂಮಿ
ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲೂ ಶನಿವಾರ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದೆ.

ನವದೆಹಲಿ: ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲೂ ಶನಿವಾರ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದೆ.
ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ನೀಡಿರುವ ಮಾಹಿತಿ ಪ್ರಕಾರ, ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 36.38 ಮತ್ತು ರೇಖಾಂಶ 70.77 ನಲ್ಲಿ 181 ಕಿ.ಮೀ ಆಳದಲ್ಲಿ ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಕಂಡುಬಂದಿದೆ. ಶನಿವಾರ ರಾತ್ರಿ ಸುಮಾರು 9:30ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಅಫ್ಘಾನಿಸ್ತಾನ ಮಾತ್ರವಲ್ಲದೇ ಪಾಕಿಸ್ತಾನದಲ್ಲೂ ಕಂಪನವಾಗಿದ್ದು, ಭಾರತದ ಜಮ್ಮು ಮತ್ತು ಕಾಶ್ಮೀ, ದೆಹಲಿ, ಎನ್ ಸಿಆರ್, ಪಂಜಾಬ್ ಮತ್ತು ಚಂಡೀಘಡ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಕಂಪನವಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಶ್ರೀನಗರ, ಗುಲ್ಮಾರ್ಗ್, ಕತ್ರಾ ಪ್ರದೇಶ, ಮಾತಾ ವೈಷ್ಣೋದೇವಿ ದೇಗುಲದ ಮೂಲ ಶಿಬಿರ ಮತ್ತು ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ, ಪೇಶಾವರ್ ಮತ್ತು ಇತರ ನಗರಗಳಲ್ಲಿ ಕಂಪನದ ಅನುಭವವಾಗಿದೆ. ಇದೇ ವೇಳೆ ಚಂಡೀಗಢ ಮತ್ತು ಪಂಜಾಬ್ನ ಹಲವು ಪ್ರದೇಶಗಳಲ್ಲಿ ಭೂಕಂಪನದಿಂದ ಭೂಮಿ ನಡುಗಿದೆ.
ಇದರ ಕೇಂದ್ರವನ್ನು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಜಿಲ್ಲೆಯಿಂದ 89 ಕಿಮೀ ಉತ್ತರ-ವಾಯುವ್ಯಕ್ಕೆ ಹೇಳಲಾಗುತ್ತಿದೆ. ಇಂದು ಮುಂಜಾನೆ 8:36 ಕ್ಕೆ ಗುಲ್ಮಾರ್ಗ್ದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದು ಗುಲ್ಮಾರ್ಗ್ನಿಂದ ಸುಮಾರು 184 ಕಿಮೀ ದೂರದಲ್ಲಿ ಭೂಮಿಯ ಮೇಲ್ಮೈಯಿಂದ 129 ಕಿಮೀ ಕೆಳಗೆ ಇತ್ತು. ಆದರೆ, ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: ಜೈಪುರ: 30 ನಿಮಿಷಗಳಲ್ಲಿ ಮೂರು ಬಾರಿ ಕಂಪಿಸಿದ ಭೂಮಿ!
ಜಮ್ಮು ಮತ್ತು ಕಾಶ್ಮೀರದ (Jammu Kashmir) ಗುಲ್ಮಾರ್ಗ್ನಲ್ಲಿ ಇಂದು ಮುಂಜಾನೆ 5.2 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲೇ ಈ ಕಂಪನ ಅನುಭವವಾಗಿದೆ.
ಜೂನ್ ನಿಂದ ಈ ವರೆಗೂ 12 ಕಂಪನಗಳು
ಅಧಿಕಾರಿಗಳ ಪ್ರಕಾರ, ಈ ವರ್ಷದ ಜೂನ್ನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ತೀವ್ರತೆಯ 12 ಕಂಪನಗಳು ಸಂಭವಿಸಿವೆ. ಜುಲೈ 10 ರಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಜೂನ್ 13 ರಂದು, ದೋಡಾ ಜಿಲ್ಲೆಯಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪನದಿಂದ ಮನೆಗಳು ಸೇರಿದಂತೆ ಹತ್ತಾರು ಕಟ್ಟಡಗಳು ಬಿರುಕುಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


