ಮಣಿಪುರ: ಬಿಷ್ಣುಪುರದಲ್ಲಿ ಮತ್ತೊಂದು ಘರ್ಷಣೆ, 17 ಮಂದಿಗೆ ಗಾಯ; ಇಂಫಾಲ ಕಣಿವೆಯಲ್ಲಿ ಕರ್ಫ್ಯೂ ಜಾರಿ
ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶದಲ್ಲಿ ಗುರುವಾರ ಘರ್ಷಣೆ ಸಂಭವಿಸಿದ್ದು, ಈ ವೇಳೆ ಸೇನೆ ಮತ್ತು ಆರ್ಎಎಫ್ (ರಾಯಲ್ ಏರ್ ಫೋರ್ಸ್) ಸಿಬ್ಬಂದಿ ಇಬ್ಬರೂ ಅಶ್ರುವಾಯು ಪ್ರಯೋಗಿಸಿದ್ದರ ಪರಿಣಾಮವಾಗಿ ಹದಿನೇಳು ಜನರು ಗಾಯಗೊಂಡಿದ್ದಾರೆ.

ಇಂಫಾಲ: ಬಿಷ್ಣುಪುರ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶದಲ್ಲಿ ಗುರುವಾರ ಘರ್ಷಣೆ ಸಂಭವಿಸಿದ್ದು, ಈ ವೇಳೆ ಸೇನೆ ಮತ್ತು ಆರ್ಎಎಫ್ (ರಾಯಲ್ ಏರ್ ಫೋರ್ಸ್) ಸಿಬ್ಬಂದಿ ಇಬ್ಬರೂ ಅಶ್ರುವಾಯು ಪ್ರಯೋಗಿಸಿದ್ದರ ಪರಿಣಾಮವಾಗಿ ಹದಿನೇಳು ಜನರು ಗಾಯಗೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ತಮ್ಮ ಜಿಲ್ಲೆಗಳಲ್ಲಿ ಈ ಹಿಂದೆ ಘೋಷಿಸಲಾಗಿದ್ದ ಕರ್ಫ್ಯೂ ಸಡಿಲಿಕೆಗಳನ್ನು ಹಿಂಪಡೆದಿದ್ದಾರೆ. ಪರಿಣಾಮವಾಗಿ ಇಡೀ ಇಂಫಾಲ್ ಕಣಿವೆಯಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ.
ಘರ್ಷಣೆಗೂ ಮೊದಲು ಗುರುವಾರ ಬೆಳಿಗ್ಗೆ ರಾಜ್ಯ ಹೈಕೋರ್ಟ್ ಚುರಾಚಂದ್ಪುರ ಜಿಲ್ಲೆಯ ಉದ್ದೇಶಿತ ಸಮಾಧಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ನಂತರ ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಸಾವಿಗೀಡಾದ ಕುಕಿ-ಜೋಮಿ ಜನರ ಸಾಮೂಹಿಕ ಸಮಾಧಿ ಕಾರ್ಯ ಸ್ಥಗಿತಗೊಂಡಿತು.
ಅಪೆಕ್ಸ್ ಬುಡಕಟ್ಟು ಸಂಸ್ಥೆಯಾದ ಐಟಿಎಲ್ಎಫ್, ಬಿಷ್ಣುಪುರದ ಗಡಿಯಲ್ಲಿರುವ ಚುರಾಚಂದ್ಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಥಳದಲ್ಲಿ 35 ಜನರ ಸಾಮೂಹಿಕ ಸಮಾಧಿ ಕಾರ್ಯವನ್ನು ಮುಂದೂಡುತ್ತಿರುವುದಾಗಿ ಹೇಳಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: 14,000ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸ್ಥಳಾಂತರಗೊಂಡಿದ್ದಾರೆ; ಶಿಕ್ಷಣ ಸಚಿವಾಲಯ ಮಾಹಿತಿ
ಭದ್ರತಾ ಪಡೆಗಳ ಚಲನವಲನವನ್ನು ತಡೆಯಲು ಸಾವಿರಾರು ಸ್ಥಳೀಯರು ಬೀದಿಗಿಳಿದಿದ್ದರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಉದ್ವಿಗ್ನತೆ ಉಂಟಾಗಿದೆ.
ಮಹಿಳೆಯರ ನೇತೃತ್ವದಲ್ಲಿ ಸ್ಥಳೀಯರು ಸೇನೆ ಮತ್ತು ಆರ್ಎಎಫ್ ಸಿಬ್ಬಂದಿ ಹಾಕಿದ್ದ ಬ್ಯಾರಿಕೇಡ್ ಅನ್ನು ದಾಟಲು ಪ್ರಯತ್ನಿಸಿದರು. ಸಾಮೂಹಿಕ ಸಮಾಧಿ ಸ್ಥಳವಾದ ಟುಯಿಬುಂಗ್ಗೆ ಹೋಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆಯನ್ನು ಹಿಂತೆಗೆದುಕೊಂಡಿದೆ. ಇಂಫಾಲ ಪೂರ್ವ ಮತ್ತು ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಕರ್ಫ್ಯೂವನ್ನು ಪುನಃ ವಿಧಿಸಲು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


