ಗ್ಯಾಂಗ್ ಸ್ಟರ್ ಅತೀಕ್ ಹಂತಕರಿಗೆ 14 ದಿನಗಳ ನ್ಯಾಯಾಂಗ ಬಂಧನ
ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕೊಂದ ಮೂವರು ದುಷ್ಕರ್ಮಿಗಳನ್ನು ಪ್ರಯಾಗರಾಜ್‌ನ ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಪ್ರಯಾಗ್ ರಾಜ್: ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಕೊಂದ ಮೂವರು ದುಷ್ಕರ್ಮಿಗಳನ್ನು ಪ್ರಯಾಗರಾಜ್‌ನ ನ್ಯಾಯಾಲಯ ಭಾನುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಶನಿವಾರ ರಾತ್ರಿ ಪ್ರಯಾಗರಾಜ್‌ನ ಶಾಹಗಂಜ್ ಪ್ರದೇಶದ ಆಸ್ಪತ್ರೆಯೊಂದರ ಹೊರಗೆ ಅತೀಕ್ ಮತ್ತು ಅವನ ಸಹೋದರನನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಹಂತಕರಾದ ಬಂಡಾದ ಲುವ್ಲೇಶ್ ತಿವಾರಿ (22) ಹಮೀರ್‌ಪುರದ ಮೋಹಿತ್ (23) ಅಲಿಯಾಸ್ ಸನ್ನಿ (23) ಮತ್ತು ಕಾಸ್ಗಂಜ್‌ನ ಅರುಣ್ ಕುಮಾರ್ ಮೌರ್ಯ (18) ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿ ಬಿದಿದ್ದರು.
ಅತೀಕ್-ಅಶ್ರಫ್ ಹತ್ಯೆಯ ಮೂವರು ಆರೋಪಿಗಳನ್ನು ಪ್ರಯಾಗ್‌ರಾಜ್‌ನ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಅಹ್ಮದ್ ಪರ ವಕೀಲ ಮನೀಶ್ ಖನ್ನಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


