ಕತ್ತೆ ಹಾಲಿನ ಸಾಬೂನಿನಿಂದ ಮಹಿಳೆಯರು ಸುಂದರವಾಗುತ್ತಾರೆ: ಬಿಜೆಪಿ ನಾಯಕಿ ಮೇನಕಾ ಗಾಂಧಿ
ಮಹಿಳೆಯರ ಸೌಂದರ್ಯವರ್ಧನೆಯ ಬಗ್ಗೆ ಮೇನಕಾ ಗಾಂಧಿ ಮಾತನಾಡಿದ್ದು, ಕತ್ತೆಯ ಹಾಲಿನ ಸಾಬೂನು ಯಾವಾಗಲೂ ಮಹಿಳೆಯರ ದೇಹವನ್ನು ಸುಂದರವಾಗಿ ಇಡುತ್ತದೆ ಎಂದು ಹೇಳಿದ್ದಾರೆ.

ಲಕ್ನೋ: ಮಹಿಳೆಯರ ಸೌಂದರ್ಯವರ್ಧನೆಯ ಬಗ್ಗೆ ಮೇನಕಾ ಗಾಂಧಿ ಮಾತನಾಡಿದ್ದು, ಕತ್ತೆಯ ಹಾಲಿನ ಸಾಬೂನು ಯಾವಾಗಲೂ ಮಹಿಳೆಯರ ದೇಹವನ್ನು ಸುಂದರವಾಗಿ ಇಡುತ್ತದೆ ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದಲ್ಲದೇ ಈಜಿಪ್ಟ್ ರಾಣಿ ಕ್ಲಿಯೋಪಾತ್ರಾ ಕೂಡ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎಂದು ಹೇಳಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಜಿಪ್ಟ್ ಪ್ರಸಿದ್ಧ ರಾಣಿ ಕ್ಲಿಯೋಪಾತ್ರಾ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದರು. ಕತ್ತೆ ಹಾಲಿನಿಂದ ತಯಾರಿಸಿದ ಸೋಪುಗಳಿಗೆ ದಿಲ್ಲಿಯಲ್ಲಿ 500 ರೂ. ಬೆಲೆ ಇದೆ. ನಾವು ಮೇಕೆ ಹಾಲು ಮತ್ತು ಕತ್ತೆಯ ಹಾಲಿನೊಂದಿಗೆ ಸಾಬೂನು ತಯಾರಿಸಲು ಏಕೆ ಪ್ರಾರಂಭಿಸಬಾರದು? ಎಂದು ಮೇನಕಾ ಗಾಂಧಿ ಹೇಳಿದ್ದಾರೆ.
ಇದಷ್ಟೇ ಅಲ್ಲದೇ, ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುತ್ತದೆ ಎಂದು ಮೇನಕಾ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇದರ ಜೊತೆಯೇ ನೀವು ಕತ್ತೆಯನ್ನು ನೋಡಿ ಎಷ್ಟು ದಿನವಾಯಿತು? ಅವುಗಳ ಸಂಖ್ಯೆ ಕುಸಿಯುತ್ತಿದೆ. ದೋಬಿಗಳು ಕೂಡ ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


