ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧದ ದೂರು ಹಕ್ಕುಚ್ಯುತಿ ಸಮಿತಿಗೆ ರವಾನಿಸಿದ ಸ್ಪೀಕರ್
ಲೋಕಸಭೆಯಲ್ಲೇ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರನ್ನು ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಿದ್ದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧದ ದೂರುಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಾರೆ...

ನವದೆಹಲಿ: ಲೋಕಸಭೆಯಲ್ಲೇ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರನ್ನು ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಿದ್ದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧದ ದೂರುಗಳನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಅಲಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ನಾಯಕಿ ಕನಿಮೋಳಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಬಿಧುರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರೆ, ನಿಶಿಕಾಂತ್ ದುಬೆಯಂತಹ ಹಲವು ಬಿಜೆಪಿ ಸಂಸದರು, ಬಿಎಸ್‌ಪಿ ಸಂಸದರೇ ಬಿಧುರಿ ಅವರು ಸದನದಲ್ಲಿ ಮಾತನಾಡುವಾಗ "ಪ್ರಚೋದನೆ" ನೀಡಿದ್ದಾರೆ. ಈ ಅಂಶವನ್ನು ಸಹ ಸ್ಪೀಕರ್ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರು ಈ ಎಲ್ಲಾ ದೂರುಗಳನ್ನು ಬಿಜೆಪಿ ಸಂಸದ ಸುನಿಲ್ ಕುಮಾರ್ ಸಿಂಗ್ ನೇತೃತ್ವದ ಹಕ್ಕುಚ್ಯುತಿ ಸಮಿತಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ ಉಲ್ಲೇಖಿಸಿದ್ದಕ್ಕಾಗಿ ಸ್ಪೀಕರ್‌ಗೆ ಧನ್ಯವಾದ ಎಂದು ದುಬೆ ಅವರು ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


