ಕೇರಳದ ಮಹಿಳೆಗೆ 1 ಕೋಟಿ ರೂಪಾಯಿ ವಂಚಿಸಿದ ನಾಲ್ವರ ಬಂಧನ
ಕೇರಳದ ಮಹಿಳೆಯೊಬ್ಬರಿಗೆ ಲಾಟರಿ ಹೊಡೆಯುವುದಾಗಿ ಆಮಿಷವೊಡ್ಡಿ 1.12 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ರಾಂಚಿ: ಕೇರಳದ ಮಹಿಳೆಯೊಬ್ಬರಿಗೆ ಲಾಟರಿ ಹೊಡೆಯುವುದಾಗಿ ಆಮಿಷವೊಡ್ಡಿ 1.12 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆಮದು ಮಾಡಿಕೊಂಡಿದ್ದ ಹಲವಾರು ಬೈಕ್‌ಗಳು, ಐಷಾರಾಮಿ ಕಾರುಗಳು, 85 ಎಟಿಎಂ ಕಾರ್ಡ್‌ಗಳು, 18 ಬ್ಯಾಂಕ್ ಪಾಸ್‌ಬುಕ್‌ಗಳು, 1.39 ಲಕ್ಷ ರೂಪಾಯಿ ನಗದು ಮತ್ತು ನಕಲಿ ಹಣದಿಂದ ಖರೀದಿಸಲಾಗಿದೆ ಎನ್ನಲಾದ ಹಲವು ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಿಹಾರ ಮೂಲದ ಜ್ಯೋತಿಶ್ ಕುಮಾರ್, ಮೋಹನ್ ಕುಮಾರ್ ಮತ್ತು ಅಜಿತ್ ಕುಮಾರ್ ಮತ್ತು ರಾಂಚಿ ಮೂಲದ ನೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಆರೋಪಿಗಳು ಕೇರಳದ ಎರ್ನಾಕುಲಂ ನಿವಾಸಿ ಶೋಭಾ ಮೆನನ್ ಎಂಬಾಕೆಯಿಂದ ಒಂದು ವರ್ಷದೊಳಗೆ 1.5 ಕೋಟಿ ರೂಪಾಯಿ ಲಾಟರಿ ಗೆಲ್ಲುವ ಆಮಿಷವೊಡ್ಡಿ ಹಣವನ್ನು ವಂಚಿಸಿದ್ದಾರೆ.
1.5 ಕೋಟಿ ಲಾಟರಿ ಗೆಲ್ಲುವುದಾಗಿ ಸಂತ್ರಸ್ತೆಗೆ ಮನವರಿಕೆ ಆಮಿಷವೊಡ್ಡಿರುವ ಆರೋಪಿಗಳು ಆಕೆಯಿಂದ 1.2 ಕೋಟಿ ರೂ. ವಂಚಿಸಿದ್ದಾರೆ. ಆರೋಪಿಗಳು ನಕಲಿ ದಾಖಲೆಗಳ ಆಧಾರದ ಮೇಲೆ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಿಸಿದ ಹಣವನ್ನು ಅವುಗಳಿಗೆ ವರ್ಗಾಯಿಸುತ್ತಿದ್ದರು ಎಂದು ನಗರದ ಎಸ್ ಪಿ ತಿಳಿಸಿದ್ದಾರೆ.
ಬಂಧಿತರು ಇತರ ಹಲವು ವಿವರಗಳನ್ನು ಬಹಿರಂಗಪಡಿಸಿದ್ದು, ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


