ದಸರಾದಲ್ಲಿ ಸನಾತನ ವಿರೋಧಿಗಳ ಪ್ರತಿಕೃತಿ ದಹನ
ದೆಹಲಿಯಲ್ಲಿನ ಕೆಲವು ರಾಮಲೀಲಾ ಸಮಿತಿಗಳು ಈ ಬಾರಿಯ ದಸರಾದಲ್ಲಿ ಸನಾತನ ವಿರೋಧಿಗಳ ಪ್ರತಿಕೃತಿಗಳನ್ನು ದಹನ ಮಾಡಲು ನಿರ್ಧರಿಸಿವೆ.

ನವದೆಹಲಿ: ದೆಹಲಿಯಲ್ಲಿನ ಕೆಲವು ರಾಮಲೀಲಾ ಸಮಿತಿಗಳು ಈ ಬಾರಿಯ ದಸರಾದಲ್ಲಿ ಸನಾತನ ವಿರೋಧಿಗಳ ಪ್ರತಿಕೃತಿಗಳನ್ನು ದಹನ ಮಾಡಲು ನಿರ್ಧರಿಸಿವೆ.
ಸನಾತನ ಧರ್ಮದ ವಿರೋಧಿಗಳನ್ನು ರಾವಣ, ಕುಂಭಕರಣ, ಮೇಘನಾದನ ಸಾಲಿಗೆ ಸೇರಿಸಿ ಅವರ ಪ್ರತಿಕೃತಿಗಳನ್ನು ದಹನ ಮಾಡಲು ನಿರ್ಧರಿಸಲಾಗಿದೆ.
ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವ ರಾಜಕಾರಣಿಗಳ ಪ್ರತಿಕೃತಿಗಳನ್ನು ಸುಡುವಂತೆ ಒತ್ತಾಯಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಸಮಿತಿಗಳ ಪದಾಧಿಕಾರಿಗಳು ಈ ಹಿಂದೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ಮಾದಕ ವ್ಯಸನವನ್ನು ಬಿಂಬಿಸುವ ಪ್ರತಿಕೃತಿಗಳನ್ನು ಸುಟ್ಟು ಹಾಕಲಾಗಿದೆ ಹಾಗಾಗಿ ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಸೇರಿದಂತೆ ಹಲವು ರಾಜಕಾರಣಿಗಳು ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿತ್ತು.
ಶ್ರೀ ಧಾರ್ಮಿಕ ಲೀಲಾ ಸಮಿತಿಯ ಸಂಚಾಲಕ ರವಿ ಜೈನ್ ಮಾತನಾಡಿ, ದಸರಾ ಸಂದರ್ಭದಲ್ಲಿ ಸಮಾಜಘಾತುಕರ ಪ್ರತಿಕೃತಿ ದಹನ ಮಾಡುವುದು ನಮ್ಮ ಸಂಪ್ರದಾಯ, ರಾಮಲೀಲಾ ಸನಾತನ ಧರ್ಮದ ಅಂಗವಾಗಿರುವುದರಿಂದ ಈ ವರ್ಷ ಅದನ್ನು ವಿರೋಧಿಸುವವರ ಪ್ರತಿಕೃತಿ ದಹಿಸುತ್ತೇವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


