ದೇಶ

ಪಂಜಾಬ್: ಖಾಸಗಿ ಬಸ್ ಕಾಲುವೆಗೆ ಬಿದ್ದು, 8 ಪ್ರಯಾಣಿಕರು ದುರ್ಮರಣ

ಪಂಜಾಬಿನ ಮುಕ್ತಸರ ಜಿಲ್ಲೆಯ ಸರ್ ಹಿಂದ್ ಫೀಡರ್ ಕಾಲುವೆಗೆ ಸುಮಾರು 35 ಜನರಿದ್ದ ಖಾಸಗಿ ಬಸ್ ವೊಂದು ಬಿದ್ದು, ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್: ಖಾಸಗಿ ಬಸ್ ಕಾಲುವೆಗೆ ಬಿದ್ದು, 8 ಪ್ರಯಾಣಿಕರು ದುರ್ಮರಣ
ಅಪಘಾತಕ್ಕೀಡಾದ ಬಸ್
Published On :

ಚಂಡೀಘಡ: ಪಂಜಾಬಿನ ಮುಕ್ತಸರ ಜಿಲ್ಲೆಯ ಸರ್ ಹಿಂದ್ ಫೀಡರ್ ಕಾಲುವೆಗೆ ಸುಮಾರು 35 ಜನರಿದ್ದ ಖಾಸಗಿ ಬಸ್ ವೊಂದು ಬಿದ್ದು, ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಕ್ತಸರ- ಕೊಟ್ಕಾಪುರ ರಸ್ತೆಯ ಝಬೆಲ್ವಾಲಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.ಬ್ರೇಕ್ ಹಾಕಿದಾಗ ಬಸ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ಮಳೆ ಸುರಿಯುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಬಸ್ ಮುಕ್ತಸರದಿಂದ ಕೊಟ್ಕಾಪುರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಕರೆಸಲಾಗಿದೆ. ಕಾಲುವೆಯಲ್ಲಿ ನೀರಿನಪ್ರವಾಹದಿಂದ ಕೆಲವು ಪ್ರಯಾಣಿಕರು ಕೊಚ್ಚಿ ಹೋಗಿರಬಹುದು ಎಂಬ ಆತಂಕವಿದೆ. ಅವರನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮುಕ್ತ್ಸಾರ್ ಡೆಪ್ಯುಟಿ ಕಮಿಷನರ್ ರುಹೀ ಡಗ್ ಹೇಳಿದ್ದಾರೆ.

ಕ್ರೇನ್ ಸಹಾಯದಿಂದ ಬಸ್ ನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಗಾಯಗೊಂಡಿರುವ ಕೆಲ ಪ್ರಯಾಣಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ಆಡಳಿತದ ತಂಡಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ನಿಯಮಿತವಾಗಿ ನವೀಕರಣಗಳನ್ನು ಪಡೆಯುತ್ತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.