ರಜೌರಿ ಎನ್‌ಕೌಂಟರ್: ಯೋಧರನ್ನು ರಕ್ಷಿಸಿ ಉಗ್ರರ ಗುಂಡೇಟಿಗೆ ಭಾರತೀಯ ಸೇನೆಯ 6 ವರ್ಷದ ಶ್ವಾನ 'ಕೆಂಟ್' ಬಲಿ; ಇಬ್ಬರು ಉಗ್ರರು ಹತ!
ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸುವ ವೇಳೆ ಕೆಂಟ್ ಎಂಬ ಆರು ವರ್ಷದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಶ್ವಾನ ಮೃತಪಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನನ್ನು ರಕ್ಷಿಸುವ ವೇಳೆ ಕೆಂಟ್ ಎಂಬ ಆರು ವರ್ಷದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ.
ಇಬ್ಬರು ಉಗ್ರರು ಹಾಗೂ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ ಇಬ್ಬರು ಉಗ್ರರು ಹತನಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇವರೊಂದಿಗೆ ಸೇನೆಯ ಕೆಂಟ್ ಎನ್ನುವ ಶ್ವಾನ ತನ್ನ ಜತೆಗಿನ ಸೈನಿಕನ ಜೀವ ಉಳಿಸಿ ಮೃತಪಟ್ಟಿದೆ.
ಸೈನಿಕರೊಂದಿಗೆ ತೆರಳುತ್ತಿದ್ದ ಶ್ವಾನ ಭಾರಿ ಗುಂಡಿನ ದಾಳಿಯ ನಡುವೆ ಸಿಕ್ಕಿಬಿದ್ದಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ. ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯ ನಾಯಿಯಾಗಿದ್ದು, ತನ್ನ ಹ್ಯಾಂಡ್ಲರ್ ಅನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಕೆಂಟ್ ಕೊನೆಯುಸಿರೆಳೆಯುವ ಮುನ್ನ ಉಗ್ರರ ಜಾಡು ಹಿಡಿದು ಸೈನಿಕರನ್ನು ಅತ್ತ ಕರೆದೊಯ್ಯುತ್ತಿತ್ತು.
ಸೇನಾ ಶ್ವಾನ ಕೆಂಟ್ ಆಪರೇಷನ್ ಸುಜಲಿಗಾಲದಲ್ಲಿ ಮುಂಚೂಣಿಯಲ್ಲಿತ್ತು, ಗುಂಡಿನ ಚಕಮಕಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಸೇರಿದಂತೆ ಇನ್ನೂ ಮೂವರು ಯೋಧರು ಗಾಯಗೊಂಡಿದ್ದಾರೆ.
ಇಬ್ಬರು ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಕ್ಕ ಓರ್ವ ಉಗ್ರನಿಗಾಗಿ ಹುಡುಕಾಟ ಮುಂದುವರೆದಿದೆ. ಉಗ್ರರಿಂದ ಬಟ್ಟೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


