ಜಿ-20 ನ್ನು ರಾಜಕೀಯಗೊಳಿಸದೇ ಇದ್ದದ್ದಕ್ಕೆ ಧನ್ಯವಾದ: ಭಾರತಕ್ಕೆ ರಷ್ಯಾ ವಿದೇಶಾಂಗ ಸಚಿವ
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ ಹಲವು ವಿಧಗಳಲ್ಲಿ ಮಹತ್ವದ ತಿರುವುಗಳನ್ನೊಳಗೊಂಡ ಸಭೆಯಾಗಿದ್ದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಲು ದಾರಿ ತೋರಿಸಿದೆ ಎಂದು ರಷ್ಯಾ ಹೇಳಿದೆ.

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ ಹಲವು ವಿಧಗಳಲ್ಲಿ ಮಹತ್ವದ ತಿರುವುಗಳನ್ನೊಳಗೊಂಡ ಸಭೆಯಾಗಿದ್ದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಲು ದಾರಿ ತೋರಿಸಿದೆ ಎಂದು ರಷ್ಯಾ ಹೇಳಿದೆ.
ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲಾವ್ರೊವ್, ಜಿ-20 ಸಭೆಯ ಬಗ್ಗೆ ಮಾತನಾಡಿದ್ದು, ಉಕ್ರೇನ್ ಸೇರಿದಂತೆ ಹಲವು ವಿಷಯಗಳಲ್ಲಿ ತಮ್ಮ ಮಾರ್ಗವನ್ನು ಮುಂದಿಡುವುದರಿಂದ ಪಶ್ಚಿಮದ ದೇಶಗಳನ್ನು ತಪ್ಪಿಸುವುದರಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕವಾಗಿ ಸೇನಾ ಸಂಘರ್ಷಗಳನ್ನು ವಿಶ್ವಸಂಸ್ಥೆ ಸನ್ನದು ಪ್ರಕಾರ ಬಗೆಹರಿಸಿಕೊಳ್ಳಬೇಕು ಹಾಗೂ ಪಾಶ್ಚಿಮಾತ್ಯ ಶಕ್ತಿಗಳು ತಮ್ಮ ವಿವಿಧ ಬಿಕ್ಕಟ್ಟುಗಳ ಪರಿಹಾರದ ಪರಿಕಲ್ಪನೆಗಳೊಂದಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತದ ನೇತೃತ್ವದ ಜಿ-20 ಕಳಿಸಿದೆ.
"ಇದು ಅನೇಕ ವಿಧಗಳಲ್ಲಿ ಅದ್ಭುತವಾದ ಶೃಂಗಸಭೆಯಾಗಿದೆ. ಇದು ಅನೇಕ ಸವಾಲುಗಳನ್ನು ಎದುರಿಸಿ ಮುಂದುವರಿಯಲು ನಮಗೆ ಒಂದು ಮಾರ್ಗವನ್ನು ಒದಗಿಸುತ್ತದೆ" ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಜಾಗತಿಕ ಆಡಳಿತ ಮತ್ತು ಜಾಗತಿಕ ಹಣಕಾಸು ಕ್ಷೇತ್ರದಲ್ಲಿಯೂ ನ್ಯಾಯಸಮ್ಮತತೆಯ ದಿಕ್ಕನ್ನು ಒದಗಿಸಿದೆ ಎಂದು ಲಾವ್ರೊವ್ ಹೇಳಿದ್ದಾರೆ.
"ಜಿ 20 ಅನ್ನು ರಾಜಕೀಯಗೊಳಿಸುವ ಪ್ರಯತ್ನಗಳನ್ನು ತಡೆಗಟ್ಟಿದ್ದಕ್ಕಾಗಿ ನಾನು ಭಾರತಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ರಷ್ಯಾ ವಿದೇಶಾಂಗ ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


