ಜಿ20 ವೇದಿಕೆ 'ಭಾರತ ಮಂಟಪ'ಕ್ಕೆ ಪ್ರಧಾನಿ ಮೋದಿ, ವಿಶ್ವ ನಾಯಕರು ಆಗಮನ; 'ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ' ಧ್ಯೇಯವಾಕ್ಯ
ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪ ಬಳಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶ್ವ ನಾಯಕರ ಆಗಮನದೊಂದಿಗೆ ಶೃಂಗಸಭೆಯು ಬೆಳಗ್ಗೆ 9.30 ರಿಂದ ಪ್ರಾರಂಭವಾಗಿದೆ.

ನವ ದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಜಿ20 ಶೃಂಗಸಭೆಯ ಸ್ಥಳವಾದ ಭಾರತ ಮಂಟಪ ಬಳಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶ್ವ ನಾಯಕರ ಆಗಮನದೊಂದಿಗೆ ಶೃಂಗಸಭೆಯು ಬೆಳಗ್ಗೆ 9.30 ರಿಂದ ಪ್ರಾರಂಭವಾಗಿದೆ.
ಜಿ20 ನಾಯಕರ ಶೃಂಗಸಭೆಯ ಅಧಿವೇಶನದಲ್ಲಿ ಒಂದು ಭೂಮಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ಅಧಿವೇಶನವು ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಮತ್ತು ಸಾಧ್ಯವಾದಷ್ಟು ಬೇಗ ಜಾಗತಿಕ ನಿವ್ವಳ ಶೂನ್ಯ ಹೊರಸೂಸುವಿಕೆಯ ಕಾರ್ಯಸೂಚಿಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ವರ್ಷದ G20 ಶೃಂಗಸಭೆಯ ವಿಷಯವು 'ವಸುಧೈವ ಕುಟುಂಬಕಂ' 'ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ' -- ಮಹಾ ಉಪನಿಷತ್ತಿನ ಪ್ರಾಚೀನ ಸಂಸ್ಕೃತ ಪಠ್ಯದಿಂದ ಪಡೆಯಲಾಗಿದೆ.
ಪ್ರಧಾನಿಯಿಂದ ಸ್ವಾಗತ: ಜಿ20 ನಾಯಕರು ದೆಹಲಿಯ ಪ್ರಗತಿ ಮೈದಾನದಲ್ಲಿ ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪಕ್ಕೆ ಆಗಮಿಸಲು ಪ್ರಾರಂಭಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟ್ನಿಯೊ ಗುಟೆರಸ್, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರಿಗೆ ಭಾರತ್ ಮಂಟಪದಲ್ಲಿ ಆತಿಥ್ಯ ನೀಡಿದರು.
ಒಡಿಶಾದ ಕೋನಾರ್ಕ್ ಚಕ್ರವನ್ನು ಪ್ರದರ್ಶನ ಮುಂದೆ ನಿಂತು ಮೋದಿಯವರು ಹಸ್ತಲಾಘವ ನೀಡಿ ವಿಶ್ವ ನಾಯಕರನ್ನು ಸ್ವಾಗತಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


