Statement on the Israel-Gaza conflict: ಪ್ಯಾಲೆಸ್ತೀನ್ ಕುರಿತ ಕಾರ್ಯಕ್ರಮದಿಂದ ಕಾಂಗ್ರೆಸ್ ಸಂಸದ ಶಶಿ ತರೂರ್ ಔಟ್
ಇಸ್ರೇಲ್-ಗಾಜಾ ಸಂಘರ್ಷ ಕುರಿತು ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್ ಪರ ಕಾರ್ಯಕ್ರಮದಿಂದ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ತೆಗೆದುಹಾಕಲು ಮುಸ್ಲಿಂ ಸಂಘಟನೆ ನಿರ್ಧರಿಸಿದೆ.

ತಿರುವನಂತಪುರ: ಇಸ್ರೇಲ್-ಗಾಜಾ ಸಂಘರ್ಷ (Israel-Gaza conflict) ಕುರಿತು ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ಟೀನ್ ಪರ ಕಾರ್ಯಕ್ರಮದಿಂದ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರನ್ನು ತೆಗೆದುಹಾಕಲು ಮುಸ್ಲಿಂ ಸಂಘಟನೆ ನಿರ್ಧರಿಸಿದೆ.
ಅಕ್ಟೋಬರ್ 30ರಂದು ತಿರುವನಂತಪುರದಲ್ಲಿ ಕಾರ್ಯಕ್ರಮ ನಡೆಸಲು ‘ಮಹಲ್ ಎಂಪವರ್ಮೆಂಟ್ ಮಿಷನ್’(ಎಂಇಎಂ) (Mahal Empowerment Mission-MEM) ಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕಾಂಗ್ರೆಸ್ (Congress) ಸಂಸದ ಶಶಿ ತರೂರ್ (Shashi Tharoor) ರನ್ನು ಆಹ್ವಾನಿಸಲು ಸಂಘಟನೆ ನಿರ್ಧರಿಸಿತ್ತು. ಆದರೆ ಇತ್ತೀಚೆಗೆ ಶಶಿ ತರೂರ್ ಅವರು ಇಸ್ರೇಲ್-ಗಾಜಾ ಸಂಘರ್ಷ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಅತಿಥಿಗಳ ಪಟ್ಟಿಯಿಂದ ತರೂರ್ ಹೆಸರು ಕೈ ಬಿಡಲು ಸಂಘಟನೆ ನಿರ್ಧರಿಸಿದೆ.
‘ಈ ಬಗ್ಗೆ ತರೂರ್ ಅವರಲ್ಲಿ ಸಮಾಲೋಚನೆ ನಡೆಸಿದ್ದು, ಕಾರ್ಯಕ್ರಮದಿಂದ ಅವರನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ’ ಎಂದು ಎಂಇಎಂ ಸಂಘಟನೆ ತಿಳಿಸಿದೆ.
ಕೋಯಿಕ್ಕೋಡ್ನಲ್ಲಿ ಗುರುವಾರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (Indian Union Muslim League) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಶಿ ತರೂರ್, ‘ಹಮಾಸ್ನ ಭಯೋತ್ಪಾದನಾ ದಾಳಿಗೆ ಇಸ್ರೇಲ್ ಪ್ರತಿಕ್ರಿಯೆ ಸೂಕ್ತವಾಗಿಲ್ಲ’ ಎಂದು ಹೇಳಿದ್ದರು. ಹೇಳಿಕೆ ಬೆನ್ನಲ್ಲೇ ತರೂರ್ ಅವರು ಹಮಾಸ್ ಸಂಘಟನೆಯನ್ನು ಭಯೋತ್ಪಾದನೆ ಸಂಘಟನೆ ಎಂದು ಕರೆದಿದ್ದಾರೆ ಎಂದು ಸಿಪಿಎಂ (CPM) ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿರುವ ತರೂರ್, ‘ನಾನು ಪಾಲೆಸ್ಟೀನ್ (Palestine) ಜನರ ಪರ ನಿಂತಿದ್ದು, ಇಸ್ರೇಲ್ (Israel) ಅನ್ನು ತಾವು ಬೆಂಬಲಿಸಿದ್ದಾಗಿ ದಾರಿತಪ್ಪಿಸುವಂತಹ ಹೇಳಿಕೆಗಳು ಬಂದಿವೆ. ಇದು ಸರಿಯಲ್ಲ’ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


