ಉತ್ತರಾಖಂಡ್ ನ ಕಾಳಿ ನದಿಗೆ ಉರುಳಿ ಬಿದ್ದ ಟ್ಯಾಕ್ಸಿ: ಬೆಂಗಳೂರಿನ ಇಬ್ಬರು ಸೇರಿದಂತೆ 6 ಮಂದಿ ಯಾತ್ರಿಕರು ಸಾವು
ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಸಂಭವಿಸಿದ ದುರಂತದಲ್ಲಿ ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಲಖನ್‌ಪುರ ಬಳಿ ಟ್ಯಾಕ್ಸಿಯೊಂದು ಕಾಳಿ ನದಿಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ್ದಾರೆ.

ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಸಂಭವಿಸಿದ ದುರಂತದಲ್ಲಿ ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಲಖನ್‌ಪುರ ಬಳಿ ಟ್ಯಾಕ್ಸಿಯೊಂದು ಕಾಳಿ ನದಿಗೆ ಬಿದ್ದು ಆರು ಮಂದಿ ದುರ್ಮರಣ ಹೊಂದಿದ್ದಾರೆ.
ಯಾತ್ರಿಕರು ಆದಿ ಕೈಲಾಸದಿಂದ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದರು, ಕತ್ತಲೆ ಮತ್ತು ಸವಾಲಿನ ಭೂಪ್ರದೇಶದ ಕಾರಣ, ಶವಗಳ ಹೊರತೆಗೆಯುವಿಕೆ ಇನ್ನೂ ಪ್ರಾರಂಭವಾಗಿಲ್ಲ ಎಂದು ಪಿಥೋರಗಢ್‌ನ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ್ ಸಿಂಗ್ ತಿಳಿಸಿದ್ದಾರೆ. ಬೆಳಗ್ಗೆಯಿಂದ ಶೋಧ ಮತ್ತು ಪತ್ತೆ ಕಾರ್ಯ ಆರಂಭವಾಗಲಿದೆ.
ಪಿಥೋರಗಢ್ ಪೊಲೀಸ್ ಅಧೀಕ್ಷಕ ಲೋಕೇಶ್ವರ್ ಸಿಂಗ್, ಧಾರ್ಚುಲಾ-ಲಿಪುಲೇಖ್ ರಸ್ತೆಯಲ್ಲಿ ಸಂತ್ರಸ್ತರು ಆದಿ ಕೈಲಾಸ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ, ಮೃತರಲ್ಲಿ ಇಬ್ಬರು ಬೆಂಗಳೂರು ಮೂಲದವರಾಗಿದ್ದಾರೆ. ತೆಲಂಗಾಣದ ಇಬ್ಬರು ಮತ್ತು ಉತ್ತರಾಖಂಡದ ಇಬ್ಬರು ಸೇರಿದಂತೆ ವಿವಿಧ ಸ್ಥಳಗಳಿಂದ ಬಂದವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಭೀಕರ ಅಪಘಾತಕ್ಕೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


