ಬೀದಿ ನಾಯಿಗಳ ದಾಳಿಗೆ ಬಲಿಯಾದ ವಾಘ್ ಬಕ್ರೀ ಟೀ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ
ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್ನಲ್ಲಿ ಮೃತಪಟ್ಟಿದ್ದಾರೆ.

ಅಹಮದಾಬಾದ್: ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅಕ್ಟೋಬರ್ 22ರಂದು ಅಹ್ಮದಾಬಾದ್ನಲ್ಲಿ ಮೃತಪಟ್ಟಿದ್ದಾರೆ.
ವಾಘ್ ಬಕ್ರೀ ಟೀ ಗ್ರೂಪ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪರಾಗ್ ದೇಸಾಯಿ ಅವರು ಸಾವನ್ನಪ್ಪಿದ್ದಾರೆ. ತಮ್ಮ ಮನೆ ಬಳಿ ನಿಂತಿದ್ದಾಗ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದರು. ಬೀದಿ ನಾಯಿಗಳು ದಾಳಿ ಮಾಡಿದಾಗ ಪರಾಗ್ ದೇಸಾಯಿ ಅವರು ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಬ್ರೈನ್ ಹೆಮರೇಜ್ನಿಂದ 49 ವರ್ಷದ ಪರಾಗ್ ದೇಸಾಯಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; ಬೆಂಗಳೂರು: ಖ್ಯಾತ ಆಹಾರ ತಜ್ಞ ಕೆ.ಸಿ ರಘು ವಿಧಿವಶ
ಪರಾಗ್ ದೇಸಾಯಿ ಅವರು ಕಳೆದ ಅಕ್ಟೋಬರ್ 15ರಂದು ಮನೆ ಬಳಿ ನಿಂತಿದ್ದಾಗ ಬೀದಿ ನಾಯಿಗಳು ದಾಳಿ ಮಾಡಿದ್ದವು. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ದಾಳಿಯನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪರಾಗ್ ದೇಸಾಯಿ ಅವರನ್ನು ಸ್ಥಳೀಯ ಶೆಲ್ಬಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಬೀದಿ ನಾಯಿಯ ದಾಳಿಯಲ್ಲೂ ಹಲವು ಗಂಭೀರ ಗಾಯಗಳಾಗಿದ್ದು, ಬ್ರೇನ್ ಹೆಮರೇಜ್ಗೆ ತುತ್ತಾಗಿದ್ದರು. ಶೆಲ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ದೇಸಾಯಿ ಅವರನ್ನು ಝೈಡಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬ್ರೇನ್ ಹೆಮರೇಜ್ನಿಂದ ಉದ್ಯಮಿ ಪರಾಗ್ ದೇಸಾಯಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದಾರೆ.
ಪರಾಗ್ ದೇಸಾಯಿ ಅವರು 2 ಸಾವಿರ ಕೋಟಿ ರೂಪಾಯಿ ವಹಿವಾಟಿನ ವಾಘ್ ಬಕ್ರೀ ಟೀ ಗ್ರೂಪ್ ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಗುಜರಾತ್ನಲ್ಲಿ ವಾಘ್ ಬಕ್ರೀ ಟೀ ಗ್ರೂಪ್ ಅನ್ನೋ ಬ್ರಾಂಡ್ ಹಾಗೂ ಕಂಪನಿಯನ್ನು ಕಟ್ಟಿ ಬೆಳೆಸಿದವರಲ್ಲಿ ಪರಾಗ್ ಅವರು ಪ್ರಮುಖರು. ಪರಾಗ್ ದೇಸಾಯಿ ಅವರ ಸಾವು ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


