ಐಐಟಿ-ಖರಗ್‌ಪುರ ವಿದ್ಯಾರ್ಥಿ ಆತ್ಮಹತ್ಯೆ: ಅಧ್ಯಾಪಕರಿಂದ 'ಅನಗತ್ಯ ಒತ್ತಡ' ಎಂದ ಪೋಷಕರು!
ಐಐಟಿ-ಖರಗ್‌ಪುರದ ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ನಂತರ, ತಮ್ಮ ಮಗನ ಆತ್ಮಹತ್ಯೆಗೆ ಸಂಸ್ಥೆಯ ಅಧ್ಯಾಪಕರೇ ಹೊಣೆ ಎಂದು ಪೋಷಕರು ಗುರುವಾರ ಆರೋಪಿಸಿದ್ದಾರೆ.

ಕೋಲ್ಕತ್ತಾ: ಐಐಟಿ-ಖರಗ್‌ಪುರದ ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ನಂತರ, ತಮ್ಮ ಮಗನ ಆತ್ಮಹತ್ಯೆಗೆ ಸಂಸ್ಥೆಯ ಅಧ್ಯಾಪಕರೇ ಹೊಣೆ ಎಂದು ಪೋಷಕರು ಗುರುವಾರ ಆರೋಪಿಸಿದ್ದಾರೆ.
ಅಧ್ಯಾಪಕರ "ಅನಗತ್ಯ" ಒತ್ತಡದಿಂದಾಗಿ ತಮ್ಮ ಪುತ್ರ ಕೆ.ಕಿರಣ್ ಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಇಂದು ಬೆಳಗ್ಗೆ ವಿದ್ಯಾರ್ಥಿಯ ತಂದೆ ಮತ್ತು ಚಿಕ್ಕಪ್ಪ ತಮ್ಮ ತವರು ರಾಜ್ಯ ತೆಲಂಗಾಣದಿಂದ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದು, ನಿರ್ದಿಷ್ಟ ಅವಧಿಯಲ್ಲಿ ಪ್ರಾಜೆಕ್ಟ್ ಪೂರ್ಣಗೊಳಿಸುವ ಸಂಬಂಧ ಕೆಲವು ಅಧ್ಯಾಪಕರಿಂದ ಕಿರಣ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
"ಪ್ರಾಜೆಕ್ಟ್ ವಿಚಾರದಲ್ಲಿ ಕಿರಣ್ ಹಿಂದುಳಿದಿದ್ದರೆ ಇನ್ಸ್ಟಿಟ್ಯೂಟ್ ಅಧಿಕಾರಿಗಳು ನಮಗೆ ತಿಳಿಸಬಹುದಿತ್ತು. ಒತ್ತಡ ಹಾಕಿದ್ದು ಸರಿಯಲ್ಲ. ಇದರಿಂದ ನಮ್ಮ ಮಗ ಪ್ರಾಣ ಕಳೆದುಕೊಳ್ಳಬೇಕಾಯಿತು" ಎಂದು ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.
ಆದಾಗ್ಯೂ, ವಿದ್ಯಾರ್ಥಿಯ ತಂದೆ ಮತ್ತು ಚಿಕ್ಕಪ್ಪ ಐಐಟಿ-ಖರಗ್‌ಪುರ ಅಧಿಕಾರಿಗಳ ಅಥವಾ ಅಧ್ಯಾಪಕರ ವಿರುದ್ಧ ಯಾವುದೇ ಕೇಸ್ ದಾಖಲಿಸಿಲ್ಲ. ಏಕೆಂದರೆ ಅದರಿಂದ ಮಗನನ್ನು ಮರಳಿ ತರಲು ಸಾಧ್ಯವಿಲ್ಲ ಎಂದಿದ್ದಾರೆ.
ವಿದ್ಯಾರ್ಥಿಯ ಸಾವು "ಆತ್ಮಹತ್ಯೆ" ಎಂದು ಐಐಟಿ-ಖರಗ್‌ಪುರ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


