ಸಿಕ್ಕಿಂ ಪ್ರವಾಹ: ಮೃತರ ಸಂಖ್ಯೆ 40ಕ್ಕೆ ಏರಿಕೆ, ಎರಡು ವಾರಗಳ ನಂತರವೂ 76 ಜನ ಇನ್ನೂ ನಾಪತ್ತೆ!
ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಸಿಕ್ಕಿಂನಲ್ಲಿನ ಪ್ರವಾಹದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿದೆ. ಆದರೆ, ದುರಂತ ಸಂಭವಿಸಿ ಎರಡು ವಾರಗಳ ನಂತರವೂ ಇನ್ನೂ 76 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾಂಗ್ಟಕ್: ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಸಿಕ್ಕಿಂನಲ್ಲಿನ ಪ್ರವಾಹದಲ್ಲಿ ಮೃತರ ಸಂಖ್ಯೆ 40ಕ್ಕೆ ಏರಿದೆ. ಆದರೆ, ದುರಂತ ಸಂಭವಿಸಿ ಎರಡು ವಾರಗಳ ನಂತರವೂ ಇನ್ನೂ 76 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 4ರ ಮುಂಜಾನೆ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ರಾಜ್ಯದಲ್ಲಿ ಭಾರಿ ಹಾನಿಯುಂಟುಮಾಡಿತು. ಸುಮಾರು 88,000 ಜನರ ಮೇಲೆ ಪ್ರವಾಹ ಪರಿಣಾಮ ಬೀರಿತು.
ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಎಸ್‌ಡಿಎಂಎ) ಪ್ರಕಾರ, ಜಿಲ್ಲೆಯಲ್ಲಿ ಪತ್ತೆಯಾದ 26 ಮೃತದೇಹಗಳಲ್ಲಿ 15 ನಾಗರಿಕರು ಮತ್ತು 11 ಮಂದಿ ಸೈನಿಕರು ಸೇರಿದ್ದಾರೆ. ಮಂಗನ್‌ನಲ್ಲಿ ನಾಲ್ಕು, ಗ್ಯಾಂಗ್ಟಕ್‌ನಲ್ಲಿ ಎಂಟು ಮತ್ತು ನಾಮ್ಚಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.
ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಹಲವಾರು ಶವಗಳು ಪತ್ತೆಯಾಗಿವೆ. ಪ್ರವಾಹವು ತೀಸ್ತಾ ನದಿಯ ಕೆಳಭಾಗದ ಪ್ರದೇಶಗಳಿಗೆ ಶವಗಳನ್ನು ಎಳೆದೊಯ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾದ 76 ಜನರಲ್ಲಿ 28 ಮಂದಿ ಪಾಕ್ಯೊಂಗ್‌ನಿಂದ, 23 ಮಂದಿ ಗ್ಯಾಂಗ್‌ಟಾಕ್‌ನಿಂದ, 20 ಮಂದಿ ಮಂಗನ್‌ನಿಂದ ಮತ್ತು ಐವರು ನಾಮ್ಚಿಯವರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 20 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 2,080 ಜನರು ಆಶ್ರಯ ಪಡೆದಿದ್ದಾರೆ ಎಂದು ಎಸ್‌ಎಸ್‌ಡಿಎಂಎ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


