ಇಸ್ರೆಲ್ ನ ಅನಾರೋಗ್ಯ ಪೀಡಿತ ದಂಪತಿಯನ್ನು ಹಮಾಸ್ ಭಯೋತ್ಪಾದಕರಿಂದ ರಕ್ಷಿಸಿದ 'ಇಂಡಿಯನ್ ಸೂಪರ್ ವುಮನ್'!
ಇಸ್ರೇಲ್ ನ ಅನಾರೋಗ್ಯ ಪೀಡಿತ ದಂಪತಿಗಳ ಕಾಳಜಿ ವಹಿಸಲು ನಿಯುಕ್ತಿಗೊಂಡಿರುವ ಕೇರಳದ ಇಬ್ಬರು ಮಹಿಳೆಯರು ದಂಪತಿಗಳ ಜೀವ ಉಳಿಸಿದ್ದಾರೆ.

ನವದೆಹಲಿ: ಇಸ್ರೇಲ್ ನ ಅನಾರೋಗ್ಯ ಪೀಡಿತ ದಂಪತಿಗಳ ಕಾಳಜಿ ವಹಿಸಲು ನಿಯುಕ್ತಿಗೊಂಡಿರುವ ಕೇರಳದ ಇಬ್ಬರು ಮಹಿಳೆಯರು ದಂಪತಿಗಳ ಜೀವ ಉಳಿಸಿದ್ದಾರೆ.
ಅ.07 ರಂದು ಇಸ್ರೇಲಿಗಳ ಹಬ್ಬದ ಸಂದರ್ಭದಲ್ಲಿ ನಡೆದ ದಾಳಿಯ ವೇಳೆ ಕೇರಳದ ಮಹಿಳೆಯರು ಹಮಾಸ್ ಉಗ್ರರಿಂದ ವೃದ್ಧ ದಂಪತಿಯ ಜೀವ ಉಳಿಸಿ ಮಾನವಿಯತೆ ಮೆರೆದಿದ್ದಾರೆ.
ಭಾರತದಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಬ್ಬರು ಕೇರಳಿಗರಾದ ಸಬಿತಾ, ಮೀರಾ ಮೋಹನನ್ ಅವರನ್ನು ಭಾರತದ ಸೂಪರ್ ವುಮೆನ್ ಎಂದು ಬಣ್ಣಿಸಿ ಧನ್ಯವಾದ ತಿಳಿಸಿದೆ.
ಇಸ್ರೆಲ್ ನ ರಾಯಭಾರ ಕಚೇರಿ ಘಟನೆ ಬಗ್ಗೆ ಸಬೀತಾ ಅವರ ಮಾತುಗಳಿರುವ ವೀಡಿಯೋವನ್ನು ಹಂಚಿಕೊಂಡಿದೆ.
ತಮ್ಮೆಡೆಗೆ ಗುಂಡಿನ ದಾಳಿ ನಡೆಯುತ್ತಿದ್ದರೂ ಈ ಇಬ್ಬರೂ ಮಹಿಳೆಯರು ತಾವಿದ್ದ ಮನೆಯ ಸುರಕ್ಷಾ ಕೊಠಡಿಯ ಬಾಗಿಲ ಹಿಡಿಯನ್ನು ಭದ್ರವಾಗಿ ಹಿಡಿದು ಹಮಾಸ್ ಉಗ್ರರು ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ.
ಇದನ್ನೂ ಓದಿ: ಯುದ್ಧ ಪೀಡಿತ ಗಾಜಾದಲ್ಲಿ ಆಹಾರ, ನೀರಿಗೆ ಹಾಹಾಕಾರ, ನೆರವಿನ ಹಸ್ತ ಚಾಚಿದ ಭಾರತೀಯ ಮೂಲದ 'ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ'
ತಾವು ಕಾಳಜಿ ವಹಿಸುತ್ತಿದ್ದ ವೃದ್ಧ ದಂಪತಿಗಳ ಪೈಕಿ ಮಹಿಳೆಗೆ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್ಎಸ್) ಎಂಬ ಆರೋಗ್ಯ ಸಮಸ್ಯೆ ಇತ್ತು ಎಂದು ಸಬಿತಾ ತಿಳಿಸಿದ್ದಾರೆ. ಬೆಳಿಗ್ಗೆ 6:30 ರ ವೇಳೆಗೆ ಸೈರನ್ ಮೊಳಗಿದ್ದನ್ನು ಕೇಳಿದ ಸಬಿತಾ ಸುರಕ್ಷಾ ಕೊಠಡಿಗೆ ತೆರಳಿದ್ದಾರೆ.
ಈ ಬಳಿಕ ವೃದ್ಧ ದಂಪತಿಯ ಮಗಳು ಕರೆ ಮಾಡಿ ಆ ಪ್ರದೇಶದಲ್ಲಿ (ಗಾಜಾ ಪಟ್ಟಿ ಗಡಿ) ಯಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ತಿಳಿಸಿ, ಮನೆಯ ಎಲ್ಲಾ ಬಾಗಿಲನ್ನು ಲಾಕ್ ಮಾಡಲು ಸೂಚಿಸಿದ್ದಾರೆ. “ಇದಾದ ಕೆಲವೇ ನಿಮಿಷಗಳಲ್ಲಿ ಭಯೋತ್ಪಾದಕರು ಮನೆಗೆ ನುಗ್ಗಿ ಗುಂಡು ಹಾರಿಸಿ ಗಾಜು ಒಡೆಯುವ ಶಬ್ದ ಕೇಳಿದೆ.
ಈ ಹಂತದಲ್ಲಿ ಸಬಿತಾ ಪುನಃ ವೃದ್ಧ ದಂಪತಿಯ ಮಗಳಿಗೆ ಕರೆ ಮಾಡಿ ಏನು ಮಾಡಬೇಕೆಂದು ಕೇಳಿದ್ದಾರೆ. "ಸುರಕ್ಷಾ ಕೊಠಡಿಯ ಬಾಗಿಲ ಹ್ಯಾಂಡಲ್ ನ್ನು ಭದ್ರವಾಗಿ ಹಿಡಿದುಕೊಂಡು ಒಳಗೆ ಯಾರೂ ಬರದಂತೆ ತಡೆಯಲು ಸೂಚಿಸಿದ್ದಾರೆ. ಅಂತಯೇ ಗುಂಡಿನ ದಾಳಿಗಳ ನಡುವೆಯೂ ಧೃತಿಗೆಡದ ಮಹಿಳೆಯರು ವೃದ್ಧ ದಂಪತಿಯನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. ಈ ಇಬ್ಬರೂ ಕಳೆದ 3 ವರ್ಷಗಳಿಂದ ಇಸ್ರೇಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


