ಪೇಮೆಂಟ್ ಗೇಟ್ ವೇ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ದೋಚಿದ್ದ ಮೂವರ ಬಂಧನ!
ಪೇಮೆಂಟ್ ಗೇಟ್ ವೇ ಸರ್ವೀಸ್ ಪೂರೈಕೆದಾರ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ರೂಪಾಯಿ ದೋಚಿದ್ದ ಮೂವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಪೇಮೆಂಟ್ ಗೇಟ್ ವೇ ಸರ್ವೀಸ್ ಪೂರೈಕೆದಾರ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ರೂಪಾಯಿ ದೋಚಿದ್ದ ಮೂವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.
ಅಮೋಲ್ ಅಂದಾಳೆ ಅಲಿಯಾಸ್ ಅಮಾನ್, ಪ್ರಮುಖ ಆರೋಪಿಯಾಗಿದ್ದು ಆತನ ವಿರುದ್ಧ ನೌಪಾದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಥಾಣೆಯ ಸೈಬರ್ ಸೆಲ್ ಪೊಲೀಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈ ಆರ್ಥಿಕ ಅಪರಾಧ ನಡೆಸುವುದಕ್ಕಾಗಿ ಅಗತ್ಯವಿದ್ದ ಕೆವೈಸಿ ವಿವರಗಳನ್ನು ವ್ಯವಸ್ಥೆ ಮಾಡುತ್ತಿದ್ದ ಆರೋಪ ಅಂದಾಳೆ ವಿರುದ್ಧ ಕೇಳಿಬಂದಿದೆ.
ಇನ್ನಿಬ್ಬರು ಆರೋಪಿಗಳನ್ನು ಅನೂಬ್ ದುಬೆ (26) ಹಾಗೂ ಸಂಜಯ್ ನಾಮದೇವ್ ಗಾಯಕ್ವಾಡ್ (42) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಈ ವಂಚನೆ ಬಹಳ ಸಮಯದಿಂದ ನಡೆಯುತ್ತಿತ್ತು, ಆದರೆ ಏಪ್ರಿಲ್ 2023 ರಲ್ಲಿ ಕಂಪನಿಯ ಪೇಮೆಂಟ್ ಗೇಟ್‌ವೇ ಸಿಸ್ಟಮ್ ಹ್ಯಾಕ್ ಆಗಿರುವ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಅದು ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಸೈಬರ್ ಸೆಲ್ ತಂಡಕ್ಕೆ 16,180 ಕೋಟಿ ರೂ.ಗೂ ಅಧಿಕ ಮೊತ್ತದ ಸಂಶಯಾಸ್ಪದ ವಹಿವಾಟು ನಡೆದಿದೆ ಎಂಬ ಅಂಶ ಬಹಿರಂಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


