ಕೋಚ್ ಅಟೆಂಡೆಂಟ್ ಜತೆ ಜಗಳ: ರೈಲಿನಲ್ಲಿ ಗುಂಡಿನ ದಾಳಿ ನಡೆಸಿದ ಪ್ರಯಾಣಿಕ ಬಂಧನ
ಸೀಲ್ದಾಹ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೋಚ್ ಅಟೆಂಡೆಂಟ್ ಜೊತೆ ಜಗಳವಾಡಿದ ಪ್ರಯಾಣಿಕನೊಬ್ಬ ಸಿಟ್ಟಿನಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಗುರುವಾರ ನಡೆದಿದೆ.

ಧಂಡ್‌ಬಾದ್: ಸೀಲ್ದಾಹ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕೋಚ್ ಅಟೆಂಡೆಂಟ್ ಜೊತೆ ಜಗಳವಾಡಿದ ಪ್ರಯಾಣಿಕನೊಬ್ಬ ಸಿಟ್ಟಿನಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಗುರುವಾರ ನಡೆದಿದೆ.
ಪ್ರಯಾಣಿಕನನ್ನು 41 ವರ್ಷದ ಹರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ, ಈತ ನಿವೃತ್ತ ಸೇನಾ ಸಿಬ್ಬಂದಿ ಎಂದು ತಿಳಿದುಬಂದಿದೆ.
ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಟಿಕೆಟ್ ಪಡೆದಿದ್ದ ಹರ್ವಿಂದರ್, ತಪ್ಪಾಗಿ ಸೀಲ್ದಾಹ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹತ್ತಿದ್ದ. ಸೀಟಿನ ವಿಚಾರಕ್ಕೆ ಕೋಚ್ ಅಟೆಂಡೆಂಟ್ ಜೊತೆಗೆ ಗಲಾಟೆಗೆ ಇಳಿದಿದ್ದ. ಈ ವೇಳೆ ಕೆಂಡಾಮಂಡಲಗೊಂಡ ಹರ್ವಿಂದರ್ ಸಿಂಗ್, ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಪಿಸ್ತೂಲ್'ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಘಟನೆ ಬಳಿಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವೇಳೆ ಹರ್ವಿಂದರ್ ಸಿಂಗ್ ಮದ್ಯದ ಅಮಲಿನಲ್ಲಿದ್ದದ್ದು ಮೇಲ್ನೋಟಕಕ್ಕೆ ಕಂಡು ಬಂದಿದೆ ಎಂದು ಧನ್‌ಬಾದ್ ರೈಲು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಅಮರೇಶ್ ಕುಮಾರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


