ಇನ್ನೂ ಮದುವೆಯಾಗದಿರುವುದಕ್ಕೆ ಕಾರಣ ಬಹಿರಂಗಪಡಿಸಿದ ರಾಹುಲ್ ಗಾಂಧಿ! ವಿಡಿಯೋ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ವಯಸ್ಸು 53 ಆದರೂ ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಮದುವೆಯಾಗದಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೈಪುರದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ವಯಸ್ಸು 53 ಆದರೂ ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಗಾಂಧಿಯವರ ಸಂವಾದದ ವೀಡಿಯೊವನ್ನು ಮಂಗಳವಾರ ಅವರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
' ನೀವು ತುಂಬಾ ಸ್ಮಾರ್ಟ್ ಹಾಗೂ ಗುಡ್ ಲುಕಿಂಗ್' ಇದ್ದರೂ ಯಾಕೆ ಇನ್ನೂ ಮದುವೆ ಬಗ್ಗೆ ಯೋಚಿಸಿಲ್ಲ? ಅಂತಾ ಯುವತಿಯೊಬ್ಬಳು ಕೇಳುತ್ತಾಳೆ. ಆಗ ತಕ್ಷಣವೇ ಉತ್ತರಿಸಿದ ರಾಹುಲ್ ಗಾಂಧಿ, ನನ್ನ ಕೆಲಸ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದ್ದೇನೆ. ಹಾಗಾಗಿ ಮದುವೆಯಾಗಿಲ್ಲ ಎನ್ನುತ್ತಾರೆ.
ರಾಹುಲ್ ಅವರ ನೆಚ್ಚಿನ ತಿನಿಸುಗಳ ಬಗ್ಗೆ ಕೇಳಿದಾಗ, ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ. ನಾನು ಯಾವಾಗಲೂ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ. ಮುಖದ ಸೌಂದರ್ಯ ಕಾಪಾಡಲು ಏನನ್ನು ಹಚ್ಚುತ್ತಿರಾ? ಎಂದು ಮತ್ತೊಬ್ಬರು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ರಾಹುಲ್, ಯಾವುದೇ ಕ್ರಿಮ್ ಅಥವಾ ಸೋಪ್ ಬಳಸುವುದಿಲ್ಲ. ನೀರಿನಿಂದ ಮಾತ್ರ ತೊಳೆಯುತ್ತೇನೆ ಎಂದು ತಿಳಿಸಿದರು.
ಹೀಗೆ ಸಮಾಜದಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ, ಆರ್ಥಿಕ ಸ್ವಾತಂತ್ರ್ಯ ಸೇರಿದಂತೆ ಹಲವು ಪ್ರಶ್ನೆಗಳು ರಾಹುಲ್ ಗಾಂಧಿ ಅವರಿಗೆ ಎದುರಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ಸಮಚಿತ್ತದಿಂದಲೇ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


