ದೇಶ

ಬರ್ತ್ ಡೇಗೆ ದುಬೈಗೆ ಕರೆದುಕೊಂಡು ಹೋಗದ್ದಕ್ಕೆ ಕೋಪ: ಪತಿಯ ಮುಖಕ್ಕೆ ಗುದ್ದಿ ಹತ್ಯೆಗೈದ ಪತ್ನಿ!

ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲ, ಬಯಸಿದಂತೆ ಹುಟ್ಟುಹಬ್ಬದ ಉಡುಗೊರೆ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿಯೊಬ್ಬಳು ಪತಿಯ ಮುಖಕ್ಕೆ ಗುದ್ದಿ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ವನ್ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬರ್ತ್ ಡೇಗೆ ದುಬೈಗೆ ಕರೆದುಕೊಂಡು ಹೋಗದ್ದಕ್ಕೆ ಕೋಪ: ಪತಿಯ ಮುಖಕ್ಕೆ ಗುದ್ದಿ ಹತ್ಯೆಗೈದ ಪತ್ನಿ!
ಸಂಗ್ರಹ ಚಿತ್ರ
Published On :

ಪುಣೆ: ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲ, ಬಯಸಿದಂತೆ ಹುಟ್ಟುಹಬ್ಬದ ಉಡುಗೊರೆ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತ್ನಿಯೊಬ್ಬಳು ಪತಿಯ ಮುಖಕ್ಕೆ ಗುದ್ದಿ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ವನ್ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿಖಿಲ್ ಪುಷ್ಪರಾಜ್ ಖನ್ನಾ (36) ಹತ್ಯೆಯಾದ ವ್ಯಕ್ತಿ. ರೇಣುಕಾ ನಿಖಿಲ್ ಖನ್ನಾ (38) ಪತಿಯನ್ನು ಹತ್ಯೆ ಮಾಡಿದ ಪತ್ನಿಯಾಗಿದ್ದಾಳೆ.

ನಿಖಿಲ್ ಮತ್ತು ರೇಣುಕಾ ಇಬ್ಬರೂ ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಸೆಪ್ಟೆಂಬರ್ 18 ರಂದು ಪತ್ನಿ ರೇಣುಕಾ ಅವರ ಹುಟ್ಟುಹಬ್ಬವಿತ್ತು. ಇದಲ್ಲದೆ, ನವೆಂಬರ್ 5 ರಂದು ದಂಪತಿಗಳ ವಿವಾಹ ವಾರ್ಷಿಕೋತ್ಸವ ಸಹ ಇತ್ತು ಮತ್ತು ಅವರು ತಮ್ಮ ಪತಿಯಿಂದ ಉತ್ತಮ ಉಡುಗೊರೆಯನ್ನು ನಿರೀಕ್ಷಿಸುತ್ತಿದ್ದರು.

ಸಂಬಂಧಿಕರ ಹುಟ್ಟುಹಬ್ಬಕ್ಕೆ ದೆಹಲಿಗೆ ತೆರಳಲು ಬಯಸಿದ್ದರು, ಆದರೆ ಪತಿಯಿಂದ ಯಾವುದೇ ಒಳ್ಳೆಯ ಪ್ರತಿಕ್ರಿಯೆ ಬರಲಿಲ್ಲ, ಇದರಿಂದ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ’’ ಎಂದು ಹೇಳಿದರು.

ಹುಟ್ಟುಹಬ್ಬ ಆಚರಣೆಗೆ ದುಬೈಗೆ ಯಾಕೆ ಕರೆದುಕೊಂಡು ಹೋಗಲಿಲ್ಲ? ನಾನು ಬಯಸಿದ ಉಡುಗೊರೆ ನನಗೆ ಏಕೆ ನೀಡಿಲಿಲ್ಲ ಎಂದು ರೇಣುಕಾ ಬೇಸರಗೊಂಡಿದ್ದರು. ಇದರಿಂದಾಗಿ ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ನಿನ್ನೆ ಮಧ್ಯಾಹ್ನ ಕೂಡ ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ಪತ್ನಿ ರೇಣುಕಾ ಕೋಪದಿಂದ ಪತಿ ಮುಖಕ್ಕೆ ಹೊಡೆದಿದ್ದಾಳೆ. ಇದರಲ್ಲಿ ನಿಖಿಲ್ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಜ್ಞೆ ಕಳೆದಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ವನವಾಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಪತ್ನಿ ರೇಣುಕಾ ಖನ್ನಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.