ತೆಲಂಗಾಣ ಚುನಾವಣೆ: ಸಿಎಂ ಕೆಸಿಆರ್ ಬಳಿ ಸ್ವಂತ ಕಾರಿಲ್ಲ! ಆಸ್ತಿ ಮೌಲ್ಯ ಎಷ್ಟು ಗೊತ್ತೇ?
ತೆಲಂಗಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ.

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಚಂದ್ರಶೇಖರ್ ರಾವ್ ತಮ್ಮ ಬಳಿ ಇರುವ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ.
ತಮ್ಮ ಬಳಿ 58.92 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಚಂದ್ರಶೇಖರ್ ರಾವ್ ಘೋಷಿಸಿಕೊಂಡಿದ್ದಾರೆ. ಸಿಎಂ ಆಗಿರುವ ಕೆಸಿಆರ್ ಸ್ವಂತದ ಕಾರು, ಕೃಷಿ ಭೂಮಿಯನ್ನು ಹೊಂದಿಲ್ಲ. ಆದರೆ ಪ್ರಮಾಣಪತ್ರದಲ್ಲಿ ತಾವು ಕೃಷಿಕರು ಎಂದು ನಮೂದಿಸಿರುವುದು ವಿಚಿತ್ರವಾಗಿದೆ.
ಗುರುವಾರ (ನವೆಂಬರ್ 9) ಬಿಆರ್‌ಎಸ್ ನಾಯಕ ಕೆಸಿಆರ್ ಗಜ್ವೆಲ್ ಮತ್ತು ಕಮ್ಮಾರೆಡ್ಡಿ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.
2018 ರ ಚುನಾವಣೆಯಲ್ಲಿ ಕೆಸಿಆರ್ ಬಳಿ 22 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಈ ಹಿಂದೆಯೂ ತಮ್ಮ ಬಳಿ ಸ್ವಂತ ಕಾರು ಇಲ್ಲವೆಂದು ಘೋಷಿಸಿದ್ದರು. ಆದರೆ 2015 ರಲ್ಲಿ ಸಿಎಂ ಬೆಂಗಾವಲು ಪಡೆಯಲ್ಲಿ ನಾಲ್ಕು ಟೊಯಾಟಾ ಲ್ಯಾಂಡ್ ಕ್ರೂಸರ್ ಕಾರು ಇತ್ತು.
ತಮ್ಮದು ಹಿಂದೂ ಅವಿಭಜಿತ ಕುಟುಂಬ ಎಂದು ಘೋಷಿಸಿರುವ ಕೆಸಿಆರ್, ತಮ್ಮ ಒಟ್ಟು ಕುಟುಂಬದ ಆಸ್ತಿ 59 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ತಮಗೆ 25 ಕೋಟಿ ರೂಪಾಯಿ ಸಾಲ ಇರುವುದಾಗಿ ತಿಳಿಸಿದ್ದಾರೆ.
ಪ್ರಮಾಣಪತ್ರದ ಪ್ರಕಾರ, ಕೆಸಿಆರ್ ಪತ್ನಿ ಶೋಭಾ ಬಳಿ ಒಟ್ಟು 7 ಕೋಟಿ ರೂಪಾಯಿ ಚರಾಸ್ತಿ ಇದ್ದು, ಹಿಂದೂ ಅವಿಭಕ್ತ ಕುಟುಂಬದಲ್ಲಿ 9 ಕೋಟಿ ರೂಪಾಯಿಗಳಷ್ಟು ಚರಾಸ್ತಿ ಇದೆ. ಅಷ್ಟೆ ಅಲ್ಲದೇ 2.81 ಕೆ.ಜಿ ಚಿನ್ನಾಭರಣ, ವಜ್ರ ಹಾಗೂ ಇತರ ಬೆಲೆ ಬಾಳುವ ಸುಮಾರು 1.5 ಕೋಟಿ ರೂಪಾಯಿ ವಸ್ತುಗಳಿವೆ. ಇಂದಿನ ಮಾರುಕಟ್ಟೆಯ ಬೆಲೆಯಲ್ಲಿ ಕೆಸಿಆರ್ ಅವರ ಸ್ಥಿರಾಸ್ತಿಯ ಒಟ್ಟು ಮೌಲ್ಯ 8.50 ಕೋಟಿ ರೂಪಾಯಿಗಳಿಷ್ಟು ಹಿಂದೂ ಅವಿಭಜಿತ ಕುಟುಂಬದ ಹೆಸರಿನಲ್ಲಿ 15 ಕೋಟಿ ರೂಪಾಯಿಗಳಿವೆ.
ಕೆಸಿಆರ್ ಪುತ್ರ, ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಹಾಗೂ ಅವರ ಕುಟುಂಬದ ಬಳಿ ಒಟ್ಟು 54.27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬಿಎ ಪದವೀಧರರಾಗಿರುವ ಕೆಸಿಆರ್ ವಿರುದ್ಧ 9 ಕ್ರಿಮಿನಲ್ ಕೇಸ್ ಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


