ಸೆಲೆಬ್ರಿಟಿಗಳ ನಿದ್ದೆಗೆಡಿಸಿದ ಡೀಪ್ ಫೇಕ್ ತಂತ್ರಜ್ಞಾನ: ರಶ್ಮಿಕಾ, ಕತ್ರೀನಾ ಬಳಿಕ ಶುಬ್ಮನ್ ಗಿಲ್-ಸಾರಾ ಫೋಟೋ ವೈರಲ್!
ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಮಾರ್ಫಿಂಗ್ ಮಾಡಲಾದ ಇಮೇಜ್‌ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ

ಸೆಲೆಬ್ರಿಟಿಗಳ ಡೀಪ್‌ಫೇಕ್, ಮಾರ್ಫ್ಡ್ ಅಥವಾ ಫೋಟೋಶಾಪ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ, ಜಾರಾ ಪಟೇಲ್ ಎಂಬ ಮಹಿಳೆಯ ದೇಹದ ಮೇಲೆ ರಶ್ಮಿಕಾ ಮಂದಣ್ಣ ಅವರ ಮಾರ್ಫ್ಡ್ ಮುಖವನ್ನು ಒಳಗೊಂಡಿರುವ ವೀಡಿಯೊ ವೈರಲ್ ಆಗಿದ್ದು, ಟೆಕ್ನಾಲಜಿಯ ಬಗ್ಗೆ ಆತಂಕ ಉಂಟು ಮಾಡಿದೆ.
ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಮಾರ್ಫಿಂಗ್ ಮಾಡಲಾದ ಇಮೇಜ್‌ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ.
ಏಕದಿನ ಕ್ರಿಕೆಟ್‌ನಲ್ಲಿ ನಂಬರ್ ವನ್ ಶ್ರೇಯಾಂಕದ ಶುಭ್ಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿರುವ ಕುರಿತಾಗಿ ವರ್ಷಗಳಿಂದ ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವ ಉದ್ದೇಶದೊಂದಿಗೆ ಡೀಪ್‌ಫೇಕ್ ಫೋಟೋವನ್ನು ಸೃಷ್ಟಿಸಲಾಗಿದೆ. ಫೋಟೋದಲ್ಲಿ ಶುಭ್ಮನ್ ಗಿಲ್ ಅವರ ಹೆಗಲಿಗೆ ಕೈ ಹಾಕಿ ನಿಂತಿರುವಂತೆ ಸಾರಾ ಕಾಣಿಸುತ್ತಿದ್ದಾರೆ.
'ಸಾರಾ ತೆಂಡೂಲ್ಕರ್ ಅವರು ಶುಭ್‌ಮನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ' ಎಂಬ ಶೀರ್ಷಿಕೆಯಡಿ ಫೋಟೋ ವೈರಲ್ ಆಗ್ತಿದೆ. ಇದು ಅಭಿಮಾನಿಗಳ (Fans) ಖುಷಿಯನ್ನು ಸಹ ಹೆಚ್ಚಿಸಿದೆ. ಆದರೆ ಈ ಫೋಟೋ ಅಸಲಿಯಲ್ಲ ಮಾರ್ಫ್ಡ್ ಎಂಬುದು ಬಯಲಾಗಿದೆ.

ಮೂಲ ಚಿತ್ರವನ್ನು ಸಾರಾ ಅವರು ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಅವರ 24ನೇ ಹುಟ್ಟುಹಬ್ಬದಂದು ಸೆಪ್ಟೆಂಬರ್ 24, 2023ರಂದು ಒಂದೆರಡು ಫೋಟೋಗಳೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ, ಮೂಲ ಚಿತ್ರದಲ್ಲಿ ಅರ್ಜುನ್ ಕುರ್ಚಿಯ ಮೇಲೆ ಕುಳಿತಿದ್ದು, ಕೈಯಲ್ಲಿ ಐಸ್ ಕ್ರೀಮ್ ಕೋನ್ ಹಿಡಿದುಕೊಂಡು ಹಸಿರು ಪ್ಯಾಂಟ್‌ನೊಂದಿಗೆ ಕಪ್ಪು ಟೀ ಶರ್ಟ್‌ನಲ್ಲಿ ಡ್ಯಾಪರ್ ಆಗಿ ಕಾಣುತ್ತಿದ್ದಾರೆ.
ಅದೇ ಚಿತ್ರದಲ್ಲಿ, ಕಪ್ಪು ಪ್ಯಾಂಟ್‌ನೊಂದಿಗೆ ಜೋಡಿಯಾಗಿರುವ ಕಂದು ಬಣ್ಣದ ಟಾಪ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದ ಸಾರಾ, ತನ್ನ ಸಹೋದರನನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ. ಇದೇ ಚಿತ್ರವನ್ನು ಎಡಿಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


