ಸೀಜ್ ಮಾಡಿದ್ದ ಮದ್ಯದ ಬಾಟಲ್ ಖಾಲಿ ಮಾಡಿದ 'ಇಲಿ' ಬಂಧಿಸಿದ ಪೊಲೀಸರು!
ಒಂದು ಇಲಿಯನ್ನು ಹಿಡಿದಿರುವ ಪೊಲೀಸರು, ಅದನ್ನು ಬೋನಿನಲ್ಲಿ ಬಂಧಿಸಿಟ್ಟಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಲಿಕ್ಕರ್ ಅನ್ನು ಇಲಿಗಳು ಖಾಲಿ ಮಾಡಿವೆ.

ಭೂಪಾಲ್ : ಮಧ್ಯ ಪ್ರದೇಶದ ಛಿಂದ್ವಾರದಲ್ಲಿ ಕಾಟ ಕೊಡುತ್ತಿದ್ದ ಇಲಿಯನ್ನು ಪೊಲೀಸರು ಬಂಧಿಸಿ ಬೋನಿನಲ್ಲಿಟ್ಟಾರೆ. ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಪೊಲೀಸ್ ಗೋದಾಮಿನಲ್ಲಿ ಸಂಗ್ರಹಿಸಿ ಇರಿಸಿದ್ದ ಮದ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆದು ಇಲಿಗಳು ಸಾಕಷ್ಟು ಮದ್ಯವನ್ನು ಖಾಲಿ ಮಾಡಿವೆ.
ಈ ಮದ್ಯವನ್ನು ಮೂಷಿಕಗಳು ಕುಡಿದಿವೆಯೋ ಅಥವಾ ಬಾಟಲಿ ಕೊರೆದು, ಸೋರಿಕೆಯಾಗಿ ಖಾಲಿಯಾಗುವಂತೆ ಮಾಡಿವೆಯೋ ಗೊತ್ತಿಲ್ಲ. ಆದರೆ ಪೊಲೀಸರು ಈ ಇಲಿಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. 'ಕಾರ್ಯಾಚರಣೆ'ಯಲ್ಲಿ ಒಬ್ಬ 'ಖದೀಮ'ನನ್ನು ಹಿಡಿದಿದ್ದಾರೆ.
ಒಂದು ಇಲಿಯನ್ನು ಹಿಡಿದಿರುವ ಪೊಲೀಸರು, ಅದನ್ನು ಬೋನಿನಲ್ಲಿ ಬಂಧಿಸಿಟ್ಟಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಲಿಕ್ಕರ್ ಅನ್ನು ಇಲಿಗಳು ಖಾಲಿ ಮಾಡಿವೆ.
ಇದು ಇಲ್ಲಿ ಹೊಸತೇನಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಕಟ್ಟಡ ಬಹಳ ಹಳೆಯದು. ಸಂಗ್ರಹಿಸಿದ ವಸ್ತುಗಳನ್ನು ಇರಿಸುವ ಗೋದಾಮು ಇಲಿಗಳ ಪಾಲಿಗೆ ಆಟದ ಮೈದಾನವಾಗಿದೆ ಎಂದು ಹೇಳಿದ್ದಾರೆ.
ಆರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಕೂಡ ಇಲಿಗಳು ಹಾಳುಗೆಡಹಿವೆ. ಅವುಗಳನ್ನು ಇರಿಸಿರುವ ಪೆಟ್ಟಿಗೆಗಳನ್ನು ಕಚ್ಚಿ ತಿಂದು ಧ್ವಂಸ ಮಾಡಿವೆ. ಇದನ್ನು ತಡೆಯಲು ಪೊಲೀಸರು ಈಗ ಗಾಂಜಾದಂತಹ ಮಾದಕ ವಸ್ತುಗಳು ಸಿಕ್ಕಾಗ ಅವುಗಳನ್ನು ಕಬ್ಬಿಣದ ಟಿನ್ ಪೆಟ್ಟಿಗೆಗಳಲ್ಲಿ ಇರಿಸಲು ಆರಂಭಿಸಿದ್ದಾರೆ.
ಸುಮಾರು 60- 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳಲ್ಲಿದ್ದ ಮದ್ಯ ಖಾಲಿಯಾಗಿದೆ. ಸದ್ಯ ಮದ್ಯ ವಶ ಪಡಿಸಿಕೊಂಡ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಕೋರ್ಟ್‌ಗೆ ಸಾಕ್ಷಿಯಾಗಿ ಮದ್ಯವನ್ನು ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಅದನ್ನು ಇಲಿಗಳು ನಾಶ ಮಾಡಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಅವರು ಗೋದಾಮಿನಲ್ಲಿರುವ ಇಲಿಗಳ ನಾಶಕ್ಕೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


