ರಾಜಸ್ಥಾನದ ಈ ತ್ರಿಪುರ ಸುಂದರಿ ದೇವಾಲಯ ಚುನಾವಣೆ ವೇಳೆ ಎಲ್ಲರ ನೆಚ್ಚಿನ ತಾಣ!
ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಾನ್ಸ್ವಾರಾ ಜಿಲ್ಲೆ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ.

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಾನ್ಸ್ವಾರಾ ಜಿಲ್ಲೆ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ.
ಹಲವು ರಾಜಕಾರಣಿಗಳು ಜಿಲ್ಲೆಗೆ ಆಗಮಿಸಿ ದೈವೀ ಕೃಪೆಗೆ ಪಾತ್ರರಾಗಲು ಹವಣಿಸುತ್ತಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೆ ಇಲ್ಲಿನ ತ್ರಿಪುರ ಸುಂದರಿ ದೇವಾಲಯದ ಪರಮ ಭಕ್ತೆಯಾಗಿದ್ದು, ಇಲ್ಲಿರುವುದು ಸಾಮ್ರಾಜ್ಯ ಅಥವಾ ಅಧಿಕಾರ ಪ್ರಾಪ್ತಿಗೆ ನೆರವು ನೀಡುವ ದೇವತೆ ಎಂದೇ ನಂಬಿದ್ದಾರೆ.
ಕೇವಲ ವಸುಂಧರಾ ರಾಜೆ ಅಷ್ಟೇ ಅಲ್ಲದೇ ಗ್ರಾಮಪಂಚಾಯತ್ ಮಟ್ಟದ ರಾಜಕಾರಣಿಗಳಿಂದ ಹಿಡಿದು ಸಚಿವರುಗಳೂ ಸಹ ಉಮ್ರೈ ಗ್ರಾಮದಲ್ಲಿರುವ ಈ ತ್ರಿಪುರ ಸುಂದರಿ ದೇವಾಲಯವನ್ನು ದರ್ಶಿಸುತ್ತಿದ್ದಾರೆ.
ಸಾಮ್ರಾಜ್ಯ ಪ್ರಾಪ್ತಿಗಾಗಿ ಪ್ರಾರ್ಥಿಸುವ ಭಕ್ತಾದಿಗಳಿಗೆ ಮಾತೆ ತ್ರಿಪುರ ಸುಂದರಿ ಸಹಾಯ ಮಾಡುತ್ತಾರೆ ಅದಕ್ಕಾಗಿಯೇ ವಿಧಾನಸಭಾ ಚುನಾವಣೆ ವೇಳೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ದೇವಾಲಯದ ಅರ್ಚಕರಾದ ನಿಕುಂಜ್ ಮೋಹನ್ ಪಾಂಡ್ಯ ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಗದ್ದುಗೆ ಮೇಲೆ ಡಿ ಕೆ ಶಿವಕುಮಾರ್ ಕಣ್ಣು: ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ಪತ್ನಿ ಜೊತೆ ಬಂದ 'ಕನಕಪುರ ಬಂಡೆ'
ರಾಜಸ್ಥಾನದ ಹಲವು ರಾಜರು ನಿರ್ಣಾಯಕ ಯುದ್ಧಗಳ ಸಂದರ್ಭದಲ್ಲಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಿದ್ದರು ಎಂದೂ ಪಾಂಡ್ಯ ಮಾಹಿತಿ ನೀಡಿದ್ದಾರೆ.
ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡುವ ರಾಜೇ ಅವರು 2013 ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಸಂಪೂರ್ಣ ಅವಧಿಯವರೆಗೆ ದೇವಸ್ಥಾನದ ಒಳಗೆಯೇ ಇದ್ದರು, ಮತ್ತು ಫಲಿತಾಂಶಗಳು ಪ್ರಕಟವಾಗುವವರೆಗೆ ಅಲ್ಲಿಯೇ ಇದ್ದರು. ಆ ಚುನಾವಣೆಯಲ್ಲಿ ಅವರು ಅಧಿಕಾರಕ್ಕೇರಿದರು ಎಂಬುದು ಗಮನಾರ್ಹ ಅಂಶವಾಗಿದೆ. ಈ ವರ್ಷ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಹಲವು ರಾಜ್ಯ ಸಚಿವರು ಸಹ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


