2022-23ರಲ್ಲಿ ಆರ್ಥಿಕತೆ ಶೇ.7.2 ಏರಿಕೆ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ
ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದ್ದು, ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.

ನವದೆಹಲಿ: ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದ್ದು, ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.
2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.1 ರಷ್ಟು ಬೆಳವಣಿಗೆಯಾಗಿದ್ದು, ಇದು ವಾರ್ಷಿಕ ಬೆಳವಣಿಗೆಯ ದರವನ್ನು ಶೇಕಡಾ 7.2 ಕ್ಕೆ ಏರಿಕೆ ಮಾಡುತ್ತದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ತೋರಿಸಿವೆ. 2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ದಾಖಲಾಗಿದ್ದರೆ ಚೀನಾ 8.1%, ಯುಕೆ 7.4% ರಷ್ಟು ದಾಖಲಾಗಿತ್ತು.
ಯಾವ ತ್ರೈಮಾಸಿಕದಲ್ಲಿ ಎಷ್ಟು?
Q1 – 13.5% (ಏಪ್ರಿಲ್-ಜೂನ್, 2022)
Q2 – 6.3% (ಜುಲೈ- ಸೆಪ್ಟೆಂಬರ್, 2022)
Q3 – 4.4% (ಅಕ್ಟೋಬರ್-ನವೆಂಬರ್, 2022)
Q4 – 6.1% (ಜನವರಿ- ಮಾರ್ಚ್, 2023)
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬುಧವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6.5% ರಷ್ಟು ದಾಖಲಾಗಬಹುದು ಎಂದು ಅಂದಾಜಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ರಷ್ಟು ದಾಖಲಾಗಿತ್ತು. ಜಾಗತಿಕ ಆರ್ಥಿಕ ಹಿಂಜರಿತ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಸ್ಥಿತಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಏರಿಳಿತಗಳು ದೇಶದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಖಾತೆಗಳ ಎರಡನೇ ಮುಂಗಡ ಅಂದಾಜಿನಲ್ಲಿ NSO 2022-23ಕ್ಕೆ ದೇಶದ ಬೆಳವಣಿಗೆಯನ್ನು ಶೇಕಡಾ 7 ಕ್ಕೆ ನಿಗದಿಪಡಿಸಿದೆ. 2023 ರ ಮೊದಲ ಮೂರು ತಿಂಗಳಲ್ಲಿ ಚೀನಾ 4.5 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.
ಯಾವ ದೇಶದ ಜಿಡಿಪಿ ಎಷ್ಟು?
ಭಾರತ – 7.2%
ಇಂಡೋನೇಷ್ಯಾ – 5.3%
ಯುಕೆ – 4.1%
ಮೆಕ್ಸಿಕೋ -3.1%
ಚೀನಾ – 3%
ಫ್ರಾನ್ಸ್ – 2.6%
ಅಮೆರಿಕ – 2.1%
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


