ಗ್ರಾಹಕರಿಗೆ ಒಪ್ಪಿಗೆ ಇಲ್ಲದೆ ಮೊಬೈಲ್ ಸಂಖ್ಯೆ ಪಡೆಯುವಂತಿಲ್ಲ: ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ
ಗ್ರಾಹಕರಿಗೆ ಒಪ್ಪಿಗೆ ಇಲ್ಲದೆ ಮೊಬೈಲ್ ಸಂಖ್ಯೆ ಪಡೆಯುವಂತಿಲ್ಲ ಎಂದು ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ: ಗ್ರಾಹಕರಿಗೆ ಒಪ್ಪಿಗೆ ಇಲ್ಲದೆ ಮೊಬೈಲ್ ಸಂಖ್ಯೆ ಪಡೆಯುವಂತಿಲ್ಲ ಎಂದು ವರ್ತಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಸರಕುಗಳ ಮಾರಾಟ ಅಥವಾ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ಗ್ರಾಹಕರ ಅನುಮತಿ ಇಲ್ಲದೆ ಅವರ ಮೊಬೈಲ್ ದೂರವಾಣಿ ಸಂಖ್ಯೆ ಪಡೆದುಕೊಳ್ಳಬಾರದು ಎಂದು ರಿಟೇಲ್ ವರ್ತಕರಿಗೆ ಸೂಚಿಸುವಂತೆ ಕೇಂದ್ರ ಸರ್ಕಾರವು ಉದ್ಯಮ ಸಂಘಟನೆಗಳಿಗೆ ಹೇಳಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಈ ಸಂಬಂಧ ಈಚೆಗೆ ಸಿಐಐ, ಫಿಕ್ಕಿ, ಅಸೋಚಾಂ, ಭಾರತೀಯ ರಿಟೇಲರ್‌ಗಳ ಒಕ್ಕೂಟ ಮತ್ತು ಅಖಿಲ ಭಾರತ ವರ್ತಕರ ಒಕ್ಕೂಟಕ್ಕೆ (ಸಿಎಐಟಿ) ಪತ್ರ ಬರೆದಿದ್ದಾರೆ.
‘ಮಾರಾಟ ಸಂದರ್ಭದಲ್ಲಿ ಗ್ರಾಹಕರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಅವರ ಒಪ್ಪಿಗೆಯಿಲ್ಲದೆ ಪಡೆಯುವಂತಿಲ್ಲ ಎಂದು ರಿಟೇಲ್ ವರ್ತಕರಿಗೆ ಸೂಕ್ತ ಸಲಹೆ ನೀಡಬೇಕು. ಮೊಬೈಲ್ ದೂರವಾಣಿ ಸಂಖ್ಯೆ ನೀಡುವುದು ಕಡ್ಡಾಯವಾಗಬಾರದು. ಹಲವು ರಿಟೇಲ್ ಮಳಿಗೆಗಳು ತಮ್ಮ ಗ್ರಾಹಕರಿಗೆ ಮೊಬೈಲ್ ಸಂಖ್ಯೆ ಸಲ್ಲಿಸಲು ಒತ್ತಾಯಿಸುತ್ತಿವೆ ಎಂಬ ದೂರುಗಳು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಬಂದಿವೆ ಎಂದು ಸಿಂಗ್ ಹೇಳಿದ್ದಾರೆ. ಮೊಬೈಲ್ ಸಂಖ್ಯೆ ಕೊಡಲು ಒಪ್ಪದ ಗ್ರಾಹಕರಿಗೆ ಉತ್ಪನ್ನ ಮಾರಾಟ ಮಾಡಲು ನಿರಾಕರಿಸಿದ ಪ್ರಸಂಗಗಳೂ ಇವೆ’ ಎಂದು ಮೇ 26ರಂದು ಬರೆದಿರುವ ಪತ್ರದಲ್ಲಿ ಸಿಂಗ್ ಹೇಳಿದ್ದಾರೆ.
ಮೊಬೈಲ್ ಸಂಖ್ಯೆ ಕೊಟ್ಟ ನಂತರದಲ್ಲಿ ಗ್ರಾಹಕರಿಗೆ ಮಾರ್ಕೆಟಿಂಗ್ ಮತ್ತು ಪ್ರಚಾರ ಉದ್ದೇಶದ ಎಸ್‌ಎಂಎಸ್‌ಗಳು ಬರುತ್ತಿವೆ. ಇವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ‘ವಸ್ತುವನ್ನು ಮಾರಾಟ ಮಾಡುವಾಗ ಮೊಬೈಲ್ ಸಂಖ್ಯೆ ಬೇಕೇಬೇಕು ಎನ್ನುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ನ್ಯಾಯಸಮ್ಮತವಲ್ಲದ ಕೆಲಸ. ಗ್ರಾಹಕರು ಮೊಬೈಲ್ ಸಂಖ್ಯೆ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಅವರಿಗೆ ಉತ್ಪನ್ನ ಮರಳಿಸಲು, ಬೇರೊಂದು ಉತ್ಪನ್ನದೊಂದಿಗೆ ವಿನಿಮಯ ಮಾಡಿಕೊಳ್ಳಲು ನಿರ್ಬಂಧಿಸುವುದು, ಅವರಿಗೆ ಹಣ ಮರಳಿಸಲು ನಿರಾಕರಿಸುವುದು ಅಥವಾ ದೂರುಗಳನ್ನು ಇತ್ಯರ್ಥ ಮಾಡದೆ ಇರುವುದು ಕೂಡ ಅಕ್ರಮ ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


