ವಿವಾದದ ಬಳಿಕ ಮುಸ್ಲಿಂ ಯುವಕನೊಂದಿಗೆ ನಿಶ್ಚಯವಾಗಿದ್ದ ಮಗಳ ಮದುವೆ ರದ್ದು ಮಾಡಿದ ಬಿಜೆಪಿ ನಾಯಕ!
ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ ಲಗ್ನ ಪತ್ರಿಕೆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿವಾದಕ್ಕೆ ಕಾರಣವಾಯಿತು. ಬಳಿಕ, ಬಿಜೆಪಿ ನಾಯಕ ಯಶಪಾಲ್ ಬೇನಾಮ್ ಅವರು ಶನಿವಾರ ಉತ್ತರಾಖಂಡ್‌ನ ಪೌರಿ ಗರ್ವಾಲ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗಿನ ತಮ್ಮ ಮಗಳ ಮದುವೆಯನ್ನು ವರನ ಕುಟುಂಬದೊಂದಿಗೆ 'ಪರಸ್ಪರ ಒಪ್ಪಿಗೆ'ಯೊಂದಿಗ

ಪೌರಿ ಗರ್ವಾಲ್: ಬಿಜೆಪಿ ನಾಯಕರೊಬ್ಬರ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗುತ್ತಿದ್ದಾಳೆ ಎಂಬ ಲಗ್ನ ಪತ್ರಿಕೆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿವಾದಕ್ಕೆ ಕಾರಣವಾಯಿತು. ಇದಾದ ಬಳಿಕ, ಬಿಜೆಪಿ ನಾಯಕ ಯಶಪಾಲ್ ಬೇನಾಮ್ ಅವರು ಶನಿವಾರ ಉತ್ತರಾಖಂಡ್‌ನ ಪೌರಿ ಗರ್ವಾಲ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗಿನ ತಮ್ಮ ಮಗಳ ಮದುವೆಯನ್ನು ವರನ ಕುಟುಂಬದೊಂದಿಗೆ 'ಪರಸ್ಪರ ಒಪ್ಪಿಗೆ'ಯೊಂದಿಗೆ ರದ್ದುಗೊಳಿಸಿದ್ದಾರೆ.

ಬಿಜೆಪಿ ಮುಖಂಡರ ಮಗಳ ಮದುವೆ ಮೇ 28ರಂದು ನಡೆಯಬೇಕಿತ್ತು. ಈಗ ಮೇ 28 ರಂದು ನಡೆಯಲಿರುವ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ನಾಯಕ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸಾರ್ವಜನಿಕ ಪ್ರತಿನಿಧಿಯಾದ ನನಗೆ ನನ್ನ ಮಗಳ ಮದುವೆ ಪೊಲೀಸ್ ಮತ್ತು ಆಡಳಿತದ ರಕ್ಷಣೆಯಲ್ಲಿ ನಡೆಯುವುದು ಇಷ್ಟವಿರಲಿಲ್ಲ. ನಾನು ಸಾರ್ವಜನಿಕ ಭಾವನೆಗಳನ್ನು ಗೌರವಿಸುತ್ತೇನೆ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಗೆ ನಿರ್ಧರಿಸಲಾಯಿತು. ಆದರೆ, ಕೆಲವು ವಿಷಯಗಳು ಮುನ್ನೆಲೆಗೆ ಬಂದ ನಂತರ ವಿವಾಹವನ್ನು ರದ್ದುಗೊಳಿಸಲಾಯಿತು ಎಂದು ಬೇನಾಮ್ ಹೇಳಿದರು.
'ನನ್ನ ಮಗಳು ಮುಸ್ಲಿಂ ಯುವಕನನ್ನು ಮದುವೆಯಾಗಲು ಹೊರಟಿದ್ದಳು. ಮಕ್ಕಳ ಸಂತೋಷ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎರಡೂ ಕುಟುಂಬಗಳು ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದವು. ಅದಕ್ಕಾಗಿ ಕಾರ್ಡ್‌ಗಳನ್ನು ಸಹ ಮುದ್ರಿಸಿ ಹಂಚಲಾಗಿತ್ತು. ಆದರೆ, ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿ, ಹಲವು ರೀತಿಯ ವಿಷಯಗಳು ಮುನ್ನೆಲೆಗೆ ಬಂದಿವೆ' ಎಂದು ಹೇಳಿದರು.
ವಿವಾದ ಭುಗಿಲೆದ್ದ ನಂತರ, ಪರಸ್ಪರ ಒಪ್ಪಿಗೆಯೊಂದಿಗೆ, ಎರಡೂ ಕುಟುಂಬಗಳು ಸದ್ಯಕ್ಕೆ ಮದುವೆಯ ವಿಧಿವಿಧಾನಗಳನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಆದರೆ, ಅದೇ ಯುವಕನೊಂದಿಗೆ ಮಗಳ ವಿವಾಹದ ಬಗ್ಗೆ ಕುಟುಂಬದವರು, ಹಿತೈಷಿಗಳು ಮತ್ತು ವರನ ಕಡೆಯವರು ಮಾತುಕತೆ ನಡೆಸಿ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


