ಉದ್ಯೋಗಕ್ಕಾಗಿ ಭೂ ಹಗರಣ: ವಿವಿಧ ರಾಜ್ಯಗಳ 9 ಕಡೆಗಳಲ್ಲಿ ಸಿಬಿಐ ಶೋಧ
ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಆರ್ ಜೆಡಿ ಶಾಸಕರಾದ ಕಿರಣ್ ದೇವಿ ಮತ್ತು ರಾಜ್ಯಸಭಾ ಸದಸ್ಯ ಪ್ರೇಮ್ ಚಂದ್ ಅವರಿಗೆ ಸೇರಿದ ವಿವಿಧ ರಾಜ್ಯಗಳ 9 ಕಡೆಗಳಲ್ಲಿರುವ ಕಚೇರಿಗಳು, ಕಟ್ಟಡಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಆರ್ ಜೆಡಿ ಶಾಸಕರಾದ ಕಿರಣ್ ದೇವಿ ಮತ್ತು ರಾಜ್ಯಸಭಾ ಸದಸ್ಯ ಪ್ರೇಮ್ ಚಂದ್ ಅವರಿಗೆ ಸೇರಿದ ವಿವಿಧ ರಾಜ್ಯಗಳ 9 ಕಡೆಗಳಲ್ಲಿರುವ ಕಚೇರಿಗಳು, ಕಟ್ಟಡಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಗರಣದಲ್ಲಿ ಇಬ್ಬರೂ ನಾಯಕರ ವಿರುದ್ಧ ಆರೋಪ ಕೇಳಿಬಂದ ನಂತರ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಕಿರಣ್ ದೇವಿ ಹಾಗೂ ಆಕೆಯ ಪತಿ ಅರುಣ್ ಸಿಂಗ್ ಅವರಿಗೆ ಸೇರಿದ ಪಾಟ್ನಾ, ಗುರುಗ್ರಾಮ್, ರೆವಾರಿ, ನೊಯ್ಡಾ ಮತ್ತು ಗುಪ್ತಾ ಅವರಿಗೆ ಸೇರಿದ ದೆಹಲಿಯಲ್ಲಿರುವ ಕಟ್ಟಡಗಳಲ್ಲಿ ಶೋಧ ಕಾರ್ಯ ನಡೆದಿದೆ. ಲಾಲು ಪ್ರಸಾದ್ ಯಾದವ್ 2004 ರಿಂದ 2009 ರವರೆಗೂ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಇದಾಗಿದೆ.
ನೇಮಕಾತಿಗೆ ಜಾಹೀರಾತು ಅಥವಾ ಸಾರ್ವಜನಿಕ ನೋಟಿಸ್ ನೀಡಿರಲಿಲ್ಲ ಆದರೆ ಪಾಟ್ನಾದ ಕೆಲ ನಿವಾಸಿಗಳನ್ನು ಮುಂಬೈ, ಜಬಲ್ ಪುರ, ಕೊಲ್ಕತ್ತಾ, ಜೈಪುರ ಮತ್ತು ಹಾಜಿಪುರದ ವಿವಿಧ ರೈಲ್ವೆ ವಲಯಗಳಿಗೆ ನೇಮಕಾತಿ ಮಾಡಿರುವ ಆರೋಪವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


