ಯುವಕನ ಪ್ರಾಣ ಉಳಿಸಿದ ಪೊಲೀಸರ ಸಮಯ ಪ್ರಜ್ಞೆ; ಫೇಸ್‌ಬುಕ್ ಲೈವ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.

ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 25 ವರ್ಷದ ಯುವಕನನ್ನು ಪೊಲೀಸರು ಸಮಯ ಪ್ರಜ್ಞೆ ಮೆರೆಯುವ ಮೂಲಕ ಆತನ ಜೀವ ಉಳಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಪೊಲೀಸರು ಜೀವದಾನ ಮಾಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ತಕ್ಷಣ ಕ್ರಮ ಕೈಗೊಂಡು ಯುವಕನ ಪ್ರಾಣ ಉಳಿಸಿದ್ದಾರೆ. ಮಂಗಳವಾರ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಈ ಪ್ರಕರಣವು ಈಶಾನ್ಯ ದೆಹಲಿಯ ನಂದ್ ನಾಗ್ರಿ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ 9.6 ನಿಮಿಷಕ್ಕೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತು. ಸಂತ್ರಸ್ತನ ಫೇಸ್‌ಬುಕ್ ಐಡಿಗೆ ಲಿಂಕ್ ಮಾಡಲಾದ ಎರಡು ಫೋನ್ ನಂಬರ್ ಗಳನ್ನು ಪೊಲೀಸ್ ತಂಡ ಟ್ರಾಕ್ ಮಾಡಿ ಅತನಿರುವ ಸ್ಥಳ ಪತ್ತೆ ಮಾಡಿ ಕೆಲವೇ ನಿಮಿಷಗಳ ಅಂತರದಲ್ಲಿ ಆತನ ಮನೆಗೆ ಧಾವಿಸಿದ್ದಾರೆ. ಪೊಲೀಸ್ ತಂಡ ಬೆಳಗ್ಗೆ 9.09ಕ್ಕೆ ಸಂತ್ರಸ್ತನ ಮನೆಗೆ ಬಂದು ಆತನನ್ನು ರಕ್ಷಿಸಿದ್ದಾರೆ. ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್‌ಎಸ್‌ಒ) ಘಟಕವು ನಂದ್ ನಾಗ್ರಿ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ (ಫೇಸ್‌ಬುಕ್) ಮಾಹಿತಿ ನೀಡಿದೆ ಎಂದು ಪೊಲೀಸ್ ಉಪ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.
ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು
ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾಗಿ ತಕ್ಷಣ ಸ್ಥಳಕ್ಕೆ ತಲುಪಿದರು. ಸ್ಥಳಕ್ಕೆ ಹೋಗುವಾಗ, ಅವರು ಆ್ಯಂಬುಲೆನ್ಸ್, ತುರ್ತು ಪ್ರತಿಕ್ರಿಯೆ ವಾಹನ, ಬೀಟ್ ಸಿಬ್ಬಂದಿ ಮತ್ತು ಪಿಸಿಆರ್ ಅನ್ನು ನಿರ್ದಿಷ್ಟ ವಿಳಾಸಕ್ಕೆ ಕಳುಹಿಸಿದರು. ಪೊಲೀಸರು ಸಂತ್ರಸ್ತೆಯ ಮನೆಗೆ ತಲುಪಿದಾಗ ಆತ (25) ತನ್ನ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ. ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದರಿಂದ ವ್ಯಕ್ತಿಯನ್ನು ರಕ್ಷಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ.
ಖಿನ್ನತೆಗೊಳಗಾಗಿದ್ದ ಯುವಕ
ಇನ್ನು ಮಾರ್ಚ್ 8 ರಿಂದ ತಮ್ಮ ಮಗ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸಂತ್ರಸ್ತೆಯ ಪೋಷಕರು ತಿಳಿಸಿದ್ದಾರೆ. ಐಎಫ್‌ಎಸ್‌ಒ ದ್ವಾರಕಾ ತಂಡವು ಸಂತ್ರಸ್ಥನ ಫೋಟೋ ಮತ್ತು ಯುವಕ ಕೈಯಲ್ಲಿ ಟ್ಯಾಬ್ಲೆಟ್ ಹಿಡಿದಿರುವ ವೀಡಿಯೊವನ್ನು ನೀಡಿದೆ ಎಂದು ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಆತ ಆತ್ಮಹತ್ಯೆ ವೇಳೆ ಮೆಥೈಲ್ಕೋಬಾಲಮಿನ್, ಟ್ರಿಪ್ಯಾಗ್ 25 ಮತ್ತು ರಿಫಾಕ್ಸ್‌ಕೇರ್ -400 ನ ಸುಮಾರು 30 ರಿಂದ 40 ಮಾತ್ರೆಗಳನ್ನು ತಾನು ಸೇವಿಸಿದ್ದೇನೆ ಎಂದು ಸಂತ್ರಸ್ತ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾತ್ರಗೆಳ ರ್ಯಾಪರ್ ಗಳು ಡಸ್ಟ್‌ಬಿನ್‌ನಲ್ಲಿ ಕಂಡುಬಂದಿವೆ. ತಕ್ಷಣ ಪೊಲೀಸರು ಆತನನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಹೇಳಿದರು.
ಒಟ್ಟಾರೆ ಪೊಲೀಸರ ಸಮಯ ಪ್ರಜ್ಞೆ ಯುವಕನೋರ್ವನ ಪ್ರಾಣ ಉಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


