ಮಾರ್ಚ್ 26ರಂದು ಇಸ್ರೋದಿಂದ ಒನ್ವೆಬ್ನ 36 ಉಪಗ್ರಹ ಉಡಾವಣೆ!
ಒನ್ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.

ಒನ್ವೆಬ್ ಅಭಿವೃದ್ಧಿಪಡಿಸಿರುವ 36 ಉಪಗ್ರಹಗಳನ್ನು ಮಾರ್ಚ್ 26ರಂದು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧವಾಗಿದೆ.
ಬ್ರಿಟನ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿ(ಒನ್ವೆಬ್) ಅನ್ನು ಭಾರತದ ಟೆಲಿಕಾಂ ಪ್ರಮುಖ ಭಾರ್ತಿ ಗ್ರೂಪ್ ಬೆಂಬಲಿಸುತ್ತದೆ. ಮಾರ್ಚ್ 26 ರಂದು ಉಪಗ್ರಹಗಳ ಯಶಸ್ವಿ ಉಡಾವಣೆಯೊಂದಿಗೆ, ಕಂಪನಿಯು ತನ್ನ Gen 1 ಸಮೂಹದ ಜಾಗತಿಕ ಹೆಜ್ಜೆಗುರುತನ್ನು ಪೂರ್ಣಗೊಳಿಸುತ್ತದೆ.
OneWeb ಅದಾಗಲೇ ಕಕ್ಷೆಯಲ್ಲಿ 582 ಉಪಗ್ರಹಗಳನ್ನು ಹೊಂದಿದೆ. ಮಾರ್ಚ್ 26ರಂದು 36 ಉಪಗ್ರಹ ಉಡಾವಣೆಯೊಂದಿಗೆ ಒಟ್ಟು ಸಂಖ್ಯೆ 618ಕ್ಕೆ ಏರಿಕೆಯಾಗಲಿದೆ.
ಈ ಮೂಲಕ OneWeb ಭಾರತ ಸೇರಿದಂತೆ ಜಾಗತಿಕ ವ್ಯಾಪ್ತಿಯನ್ನು ತಲುಪಿಸುವಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದೆ ಎಂದು ಕಂಪನಿ ಹೇಳಿದೆ.
OneWeb ಪ್ರಕಾರ, 36 ಉಪಗ್ರಹಗಳ ಎರಡನೇ ಬ್ಯಾಚ್ ಅನ್ನು ಭಾರತೀಯ ಕಾಲಮಾನ ಮಾರ್ಚ್ 26 ರಂದು ಬೆಳಿಗ್ಗೆ 9 ಗಂಟೆಗೆ ಇಸ್ರೋ ರಾಕೆಟ್ LVM3 ಉಡಾವಣೆ ಮಾಡಲಿದೆ.
ಇದಕ್ಕೂ ಮೊದಲು 18 ಉಪಗ್ರಹ ಗಳ ಮೊದಲ ಬ್ಯಾಚ್ ಅನ್ನು 2022ರ ಅಕ್ಟೋಬರ್ 23 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ LVM3 ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


