ದೇಶ

ಅಪರೂಪದ ಭಾರತದ ಹೆಬ್ಬಕ (ಇಂಡಿಯನ್ ಬಸ್ಟರ್ಡ್) ರಕ್ಷಣೆಗೆ ರಾಜಸ್ಥಾನ ಸರ್ಕಾರದಿಂದ ಭೂಮಿ ಮಂಜೂರು!

ಕಣ್ಮರೆಯಾಗುತ್ತಿರುವ ರಾಜ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಗೋದಾವನ್) ರಕ್ಷಣೆಗೆ ರಾಜಸ್ಥಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ಅಪರೂಪದ ಭಾರತದ ಹೆಬ್ಬಕ (ಇಂಡಿಯನ್ ಬಸ್ಟರ್ಡ್) ರಕ್ಷಣೆಗೆ ರಾಜಸ್ಥಾನ ಸರ್ಕಾರದಿಂದ ಭೂಮಿ ಮಂಜೂರು!
ಭಾರತದ ಅಪರೂಪದ ಬಸ್ಟರ್ಡ್
Published On :

ಜೈಪುರ: ಕಣ್ಮರೆಯಾಗುತ್ತಿರುವ ರಾಜ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಗೋದಾವನ್) ರಕ್ಷಣೆಗೆ ರಾಜಸ್ಥಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಜೈಸಲ್ಮೇರ್‌ನ ಡೆಸರ್ಟ್ ನ್ಯಾಶನಲ್ ಪಾರ್ಕ್ ಪ್ರದೇಶದಲ್ಲಿ ನೆಲೆಗೊಂಡಿರುವ ನಾಲ್ಕು ಗ್ರಾಮಗಳ 15,878 ಬಿಘಾ ಕಂದಾಯ ಭೂಮಿಯನ್ನು ರಾಜ್ಯ ಸರ್ಕಾರವು (ಉಚಿತವಾಗಿ) ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶೇಷವಾಗಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಗಾಗಿ ಅರಣ್ಯ ಇಲಾಖೆಗೆ ಮಂಜೂರು ಮಾಡಿದೆ.

ಈ ಹೆಚ್ಚುವರಿ ಭೂಮಿಯೊಂದಿಗೆ ಕೆಲವೊಂದು ಹೊಸ ಗೋದಾವನ್ ಪಕ್ಷಿಯನ್ನು ಮರುಭೂಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಇಡಲಾಗುತ್ತಿದೆ ಮತ್ತು ದೇಶದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂತಾನೋತ್ಪತ್ತಿಗೆ ಉತ್ತಮ ಸಂಪನ್ಮೂಲಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ.

ಸ್ಥಳೀಯವಾಗಿ 'ಗೋದಾವನ್' ಎಂದು ಕರೆಯಲ್ಪಡುವ ಈ ಪಕ್ಷಿಯನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಎಂದು  ವರ್ಗೀಕರಿಸಿದೆ. ಹಿಂದೊಮ್ಮೆ 12 ರಾಜ್ಯಗಳಲ್ಲಿ ವಾಸಿಸುತ್ತಿದ್ದ ಈ ಪಕ್ಷಿಯು ತನ್ನ ಹಿಂದಿನ ಆವಾಸಸ್ಥಾನದ ಶೇ. 90 ರಷ್ಟು ಪ್ರದೇಶದಿಂದ ನಾಶವಾಗಿದ್ದು, ಮೂರು ಸಣ್ಣ  ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ: ರಾಜಸ್ಥಾನದ ಜೈಸಲ್ಮೇರ್, ಗುಜರಾತ್‌ನ ಕಚ್‌ನ ಹುಲ್ಲುಗಾವಲುಗಳು ಮತ್ತು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಇವೆ. 

ಗೋದಾವನ್ ರಕ್ಷಣೆ ಮತ್ತು ಸಂತಾನೋತ್ಪತ್ತಿಗಾಗಿ ಹೊಸ ಸಂಪನ್ಮೂಲಗಳಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾಗಿ ಮರುಭೂಮಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ವ್ಯಾಸ್ ಹೇಳಿದರು. ಇಲಾಖೆಯ ಪ್ರಸ್ತಾವನೆಯಲ್ಲಿ ಗೋದಾವನ ರಕ್ಷಣೆಗೆ ಸಂಬಂಧಿಸಿದಂತೆ ಹೆಚ್ಚಿನ ಜಮೀನಿನ ಅಗತ್ಯತೆಗಾಗಿ ಒತ್ತಾಯಿಸಲಾಗಿತ್ತು.  ಈ ಪ್ರಸ್ತಾವನೆಯೊಂದಿಗೆ, ಜಮ್ಡಾ, ಬಿಡಾ, ಚೌಹಾನಿ ಮತ್ತು ಬರ್ನಾ ಗ್ರಾಮಗಳ ಒಟ್ಟು 183 ಖಾಸ್ರಾ ಸಂಖ್ಯೆಗಳ 15,878.12 ಬಿಘಾ ಭೂಮಿಯನ್ನು ಜೈಸಲ್ಮೇರ್‌ನ ಮರುಭೂಮಿ ರಾಷ್ಟ್ರೀಯ ಉದ್ಯಾನವನದ ಕಂದಾಯ ತಹಸಿಲ್‌ಗೆ ವರ್ಗಾಯಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.