ಹೈದರಾಬಾದ್ ನಲ್ಲಿ ಅಮಿತ್ ಶಾ ಗೆ ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಸ್ವಾಗತ!: ಹೀಗ್ಯಾಕೆ ಅಂದರೆ...
ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ್ದು, ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತಿಸಿದೆ.

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ್ದು, ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತಿಸಿದೆ.
ಸಿಐಎಸ್ಎಫ್ ರೈಸಿಂಗ್ ಡೇ ಪರೇಡ್ ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದು, ನಿರ್ಮಾ ಜಾಹಿರಾತಿನ ಪೋಸ್ಟರ್ ನಲ್ಲಿ ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಫೋಟೋಗಳು ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ.
ನಿರ್ಮ ಜಾಹಿರಾತಿನಲ್ಲಿರುವ ಬಾಲಕಿಯ ಫೋಟೋಗೆ ಮೇಲೆ ಉಲ್ಲೇಖಿಸಿರುವ ಬಿಜೆಪಿ ನಾಯಕರ ಫೋಟೋ ಜೋಡಿಸಲಾಗಿದ್ದು, ಈ ನಾಯಕರೆಲ್ಲರೂ ಬಿಜೆಪಿ ಸೇರಿದ ಮೇಲೆ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂದು ಬಿಆರ್ ಎಸ್ ವ್ಯಂಗ್ಯವಾಡಿದೆ. ಈ ರೀತಿಯ ಪೋಸ್ಟರ್ ಹಾಕುವ ಮೂಲಕ ಅಮಿತ್ ಶಾ ಅವರನ್ನು ಬಿಆರ್ ಎಸ್ ಸ್ವಾಗತಿಸಿದೆ.

ಇದೇ ರೀತಿಯಲ್ಲಿ ಬಿಜೆಪಿ ನಾಯಕರನ್ನೊಳಗೊಂಡ ವಾಷಿಂಗ್ ಪೌಡರ್ ಬ್ರಾಂಡ್ ನ ಮತ್ತೊಂದು ಪೋಸ್ಟರ್ ಹಾಕಿದ್ದ ಬಿಆರ್ ಎಸ್, ಟೈಡ್ ಡಿಟರ್ಜೆಂಟ್ ನ ಮಾದರಿಯ ಜಾಹಿರಾತಿನಲ್ಲಿ ತನಿಖಾ ಸಂಸ್ಥೆಗಳ ರೈಡ್ ನ್ನು ವ್ಯಂಗ್ಯವಾಡಿತ್ತು. ಅದರಲ್ಲಿ ಹಿಮಂತ ಬಿಸ್ವ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ರೈಡ್ ಗಳ ಪರಿಣಾಮದಿಂದ ಬಿಜೆಪಿಗೆ ಸೇರ್ಪಡೆಯಾಗಿರುವುದು ಹಾಗೂ ಎಷ್ಟೇ ರೈಡ್ ಗಳಾದರೂ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರ ಬಣ್ಣ ಬದಲಾಗಿಲ್ಲ ಎಂದು ಬಿಆರ್ ಎಸ್ ಹೇಳಿದೆ.
ಇದೇ ವೇಳೆ ಪ್ರಧಾನಿಯನ್ನು ಬಿಆರ್ ಎಸ್ ರಾವಣನಿಗೆ ಹೋಲಿಕೆ ಮಾಡಿ ಪ್ರಜಾಪ್ರಭುತ್ವ ನಾಶ ಮಾಡಿದ ವ್ಯಕ್ತಿ, ಬೂಟಾಟಿಕೆಯ ಪಿತಾಮಹ ಎಂದು ಹೇಳಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


