ದೇಶವ್ಯಾಪಿ ಮುಸ್ಲಿಮರನ್ನು ತಲುಪುವ ಬಿಜಿಪಿ ಕಾರ್ಯಕ್ರಮಕ್ಕೆ ಜಮ್ಮು-ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ
ದೇಶವ್ಯಾಪಿ ಮುಸ್ಲಿಮರನ್ನು ತಲುಪುವುದಕ್ಕಾಗಿ ಬಿಜೆಪಿಯ ಕಾರ್ಯಕ್ರಮ ಮಾ.09 ರಿಂದ ಆರಂಭವಾಗಿದ್ದು, ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನವದೆಹಲಿ: ದೇಶವ್ಯಾಪಿ ಮುಸ್ಲಿಮರನ್ನು ತಲುಪುವುದಕ್ಕಾಗಿ ಬಿಜೆಪಿಯ ಕಾರ್ಯಕ್ರಮ ಮಾ.09 ರಿಂದ ಆರಂಭವಾಗಿದ್ದು, ಮುಸ್ಲಿಮ್ ಬಾಹುಳ್ಯವಿರುವ ಕಾಶ್ಮೀರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕಣಿವೆ ಹಾಗೂ ದೇಶದ ಉಳಿದ ಭಾಗಗಳ ನಡುವೆ ಉಂಟಾಗಿರುವ ಅಂತರವನ್ನು ನಿವಾರಿಸಬೇಕೆಂಬ ವಿಷಯದಲ್ಲಿ ಒಮ್ಮತ ವ್ಯಕ್ತವಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ಮಾ.10 ರಂದು ದೇಶಾದ್ಯಂತ ಮುಸ್ಲಿಮರನ್ನು ತಲುಪುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ಮೊದಲ ಹಂತದಲ್ಲಿ ಜಮ್ಮು-ಕಾಶ್ಮೀರ ಸೇರಿ ದೇಶದ 64 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಿದೆ.
ಜಮ್ಮು-ಕಾಶ್ಮೀರದ ಮುಸ್ಲಿಮರು ಹಲವು ಸಮಸ್ಯೆಗಳನ್ನು ಹೊಂದಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಲು ಬಯಸುತ್ತಿದ್ದಾರೆ ಅಂತೆಯೇ ದೇಶದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಭದ್ರತೆಯ ಭಾವವನ್ನು ಎದುರುನೋಡುತ್ತಿದ್ದಾರೆ. ಸರ್ಕಾರದಲ್ಲಿ ಯಾರೇ ಇರಲಿ, ಪರಿಹಾರಗಳನ್ನು ಅವರು ಎದುರು ನೋಡುತ್ತಿದ್ದರೆ, ಅದು ಸ್ವಾಗತಾರ್ಹ ಕ್ರಮ ಎಂದು ಜಮ್ಮು-ಕಾಶ್ಮೀರದ್ ಅಗ್ರಾಂಡ್ ಮುಫ್ತಿ ಮುಫ್ತಿ ನಾಸಿರ್ ಉಲ್ ಇಸ್ಲಾಮ್ ಪಿಟಿಐ ಗೆ ಹೇಳಿದ್ದಾರೆ.
ಇದನ್ನೂ ಓದಿ: ಶಬ್-ಎ-ಬರಾತ್ ರಾತ್ರಿ ಬೈಕ್ ಸ್ಟಂಟ್ ಮಾಡಬೇಡಿ; ಯುವಕರಿಗೆ ಮುಸ್ಲಿಂ ಸಮುದಾಯದ ಹಿರಿಯರ ಕಿವಿಮಾತು
ಹರ್ಯಾಣದಲ್ಲಿ ಇತ್ತೀಚೆಗೆ ವರದಿಯಾದ ಇಬ್ಬರು ಮುಸ್ಲಿಮರ ಮೇಲಿನ ಗುಂಪು ಥಳಿತ ಪ್ರಕರಣಗಳು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನಾಸಿರ್ ಉಲ್ ಇಸ್ಲಾಮ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಕಾಶ್ಮೀರ ಕಣಿವೆಯ ಮುಸ್ಲಿಮರ ನಡುವೆ ಅಂತರವಿದೆ. ಆರ್ಟಿಕಲ್ 370 ರದ್ದತಿ ಬಳಿಕ ಹಲವು ಭರವಸೆಗಳನ್ನು ನೀಡಲಾಗಿತ್ತು, ಆದರೆ ಅದ್ಯಾವುದೂ ನಿಜವಾಗಿಲ್ಲ. ನೆಲಸಮಗೊಳಿಸುವ ಅಭಿಯಾನದ ಮೂಲಕ ಜನರ ಹೃದಯ ಗೆಲ್ಲುವುದಕ್ಕೆ ಸಾಧ್ಯವೇ?, ಅವರು ಜನರನ್ನು ಮೂರ್ಖರನ್ನಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


