ಚಾಲಕನಿಲ್ಲದೆ ಶೋರೂಂಗೆ ನುಗ್ಗಿದ ಟ್ರಾಕ್ಟರ್: ವಿಡಿಯೋ ವೈರಲ್
ಶೋರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ವೊಂದು ಚಾಲಕನಿಲ್ಲದೆ ಹೋದರೂ ಅಚಾನಕ್ಕಾಗಿ ಸ್ಟಾರ್ಟ್ ಆಗಿ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಲಖನೌ: ಶೋರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ವೊಂದು ಚಾಲಕನಿಲ್ಲದೆ ಹೋದರೂ ಅಚಾನಕ್ಕಾಗಿ ಸ್ಟಾರ್ಟ್ ಆಗಿ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಬಿಜ್ನೋರ್ ನ ಕೊತ್ವಾಲಿ ನಗರದ ಮುಂಭಾಗದಲ್ಲಿ ಶೂ ಶೋರೂಮ್ ನಲ್ಲಿ ಈ ಘಟನೆ ವರದಿಯಾಗಿದ್ದು, ಶೋ ರೂಂ ಹೊರಗೆ ನಿಂತಿದ್ದ ಟ್ರಾಕ್ಟರ್ ನೋಡನೋಡುತ್ತಲೇ ದಿಢೀರ್ ಸ್ಟಾರ್ಟ್ ಆಗಿ ಶೋ ರೂಂಗೆ ನುಗ್ಗಿದೆ. ಈ ವೇಳೆ ಶೋರೂಂ ಗ್ಲಾಸ್ ಡೋರ್ ಛಿದ್ರವಾಗಿದ್ದು, ಟ್ರಾಕ್ಟರ್ ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ ನಿಗೂಢವಾಗಿ ಟ್ರ್ಯಾಕ್ಟರ್ ಗಾಜು ಒಡೆದು ಶೂ ಶೋರೂಂಗೆ ನುಗ್ಗುತ್ತಿರುವುದು ಕಂಡು ಬಂದಿದೆ. ಅಚ್ಚರಿಯ ವಿಷಯವೆಂದರೆ ಟ್ರ್ಯಾಕ್ಟರ್‌ನಲ್ಲಿ ಚಾಲಕ ಕೂಡ ಇರಲಿಲ್ಲ. ಘಟನೆ ಕುರಿತು ಶೋರೂಂ ಸಿಬ್ಬಂದಿಯಲ್ಲಿ ಗೊಂದಲ ಉಂಟಾಯಿತು. ಬಳಿಕ ನೌಕರರು ಹೇಗೋ ಟ್ರ್ಯಾಕ್ಟರ್ ಬಂದ್ ಮಾಡಿದ್ದಾರೆ. ಟ್ರ್ಯಾಕ್ಟರ್ ನಿಂತ ನಂತರ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಭಾರಿ ಇನ್ಸ್‌ಪೆಕ್ಟರ್ ಕೊತ್ವಾಲಿ ನಗರ ನರೇಂದ್ರ ಗೌರ್ ತಿಳಿಸಿದ್ದಾರೆ.
ಏನಿದು ಘಟನೆ?
ಇದೇ ಮಂಗಳವಾರ ಸಂಜೆ ಶೋರೂಂನ ಹೊರಭಾಗದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಸ್ಟಾರ್ಟ್ ಆಗಿ ಶೋರೂಂನ ಗಾಜು ಒಡೆದು ಶೋರೂಂಗೆ ನುಗ್ಗಿದೆ. ಘಟನೆಯಿಂದ ಶೋರೂಂನಲ್ಲಿದ್ದ ಸಿಬ್ಬಂದಿ ದಂಗಾಗಿದ್ದಾರೆ. ಶೋರೂಂನಲ್ಲಿದ್ದ ನೌಕರರು ಹೇಗೋ ಟ್ರ್ಯಾಕ್ಟರ್ ನಿಲ್ಲಿಸಿದ್ದಾರೆ. ಘಟನೆಯ ನಂತರ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಘಟನೆಯ ಸಮಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಯಾವುದೇ ಚಾಲಕ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಟ್ರ್ಯಾಕ್ಟರ್ ತಾನಾಗಿಯೇ ಸ್ಟಾರ್ಟ್ ಆಗಿ ಶೋರೂಂ ಪ್ರವೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


