ದೇಶ

'ವ್ಯಾಗ್ನರ್ ಗುಂಪು' ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ: ಉದ್ಧವ್ ಠಾಕ್ರೆ

ಭಾರತದಲ್ಲಿನ "ವ್ಯಾಗ್ನರ್ ಗುಂಪು( ವಿರೋಧ ಪಕ್ಷಗಳು)" ಅಹಿಂಸೆಯ ಮಾರ್ಗವನ್ನು ಬಳಸಿಕೊಂಡು ಮತದಾನದ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನೆ(ಯುಬಿಟಿ) ಗುಡುಗಿದೆ.

'ವ್ಯಾಗ್ನರ್ ಗುಂಪು' ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Published On :

ಮುಂಬೈ: ಭಾರತದಲ್ಲಿನ "ವ್ಯಾಗ್ನರ್ ಗುಂಪು( ವಿರೋಧ ಪಕ್ಷಗಳು)" ಅಹಿಂಸೆಯ ಮಾರ್ಗವನ್ನು ಬಳಸಿಕೊಂಡು ಮತದಾನದ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನೆ(ಯುಬಿಟಿ) ಸೋಮವಾರ ಗುಡುಗಿದೆ.

ಕಳೆದ ವಾರ ನಾಟಕೀಯ ಬೆಳವಣಿಗೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಖಾಸಗಿ ಸೇನೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ಸಶಸ್ತ್ರ ದಂಗೆಗೆ ಕರೆ ನೀಡಿದ್ದರು. ಆದರೆ  ಪುಟಿನ್ ಈ ದಂಗೆಯನ್ನು ದ್ರೋಹ ಮತ್ತು ದೇಶದ್ರೋಹದ ಕೃತ್ಯ ಎಂದು ಕರೆದರು.

ನಂತರ, ಬೆಲಾರಸ್ ಅಧ್ಯಕ್ಷರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿ, ರಷ್ಯಾದಲ್ಲಿ ರಕ್ತಪಾತ ತಡೆಯಲು ಮಾಸ್ಕೋ ಮುತ್ತಿಗೆ ಹಿಂಪಡೆಯುತ್ತಿರುವುದಾಗಿ ಪ್ರಿಗೋಜಿನ್ ಹೇಳಿದ್ದರು.

ಸೇನಾ(UBT) ಮುಖವಾಣಿ 'ಸಾಮ್ನಾ' ತನ್ನ ಸಂಪಾದಕೀಯದಲ್ಲಿ ವ್ಯಾಗ್ನರ್ ಗುಂಪಿನ "ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧದ ದಂಗೆ" ಮತ್ತು ಕಳೆದ ವಾರ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯನ್ನು ಉಲ್ಲೇಖಿಸಿದೆ.

ಪಾಟ್ನಾದಲ್ಲಿ ಹನ್ನೆರಡಕ್ಕೂ ಹೆಚ್ಚು ವಿರೋಧ ಪಕ್ಷಗಳ 32ಕ್ಕೂ ಹೆಚ್ಚು ನಾಯಕರು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿದ್ದರು.

"ವ್ಯಾಗ್ನರ್ ಗುಂಪು" ಸರ್ವಾಧಿಕಾರಿಯನ್ನು ಪ್ರಶ್ನಿಸಬಹುದು ಎಂಬುದನ್ನು ತೋರಿಸಿದೆ. ಅದು ಮೋದಿ ಅಥವಾ ಪುಟಿನ್ ಯಾರೇ ಆಗಲಿ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.

ಭಾರತದಲ್ಲಿ ವ್ಯಾಗ್ನರ್‌ ಗ್ರೂಪ್ ಅಹಿಂಸಾತ್ಮಕವಾಗಿ, ಮತಪೆಟ್ಟಿಗೆಯ ಮೂಲಕ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ” ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.

ಪುಟಿನ್ ಅವರಂತೆ ಮೋದಿಯೂ ಹೋಗಬೇಕು. ಆದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋಗಬೇಕು ಎಂದು ಶಿವಸೇನಾ(UBT) ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.