ದೇಶ

ಯುಪಿ: ನವದಂಪತಿ, ಸ್ನೇಹಿತ, ಇಬ್ಬರು ಕುಟುಂಬಸ್ಥರನ್ನು ಕೊಂದು ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಜಿಲ್ಲೆಯ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್‌ಪುರ ಗ್ರಾಮದಲ್ಲಿ ಯುವಕನೊಬ್ಬ ತನ್ನ ನಾಲ್ವರು ಸಂಬಂಧಿಕರು...

ಯುಪಿ: ನವದಂಪತಿ, ಸ್ನೇಹಿತ, ಇಬ್ಬರು ಕುಟುಂಬಸ್ಥರನ್ನು ಕೊಂದು ಕೊನೆಗೆ ತಾನೂ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!
ಸಂಗ್ರಹ ಚಿತ್ರ
Published On :

ಲಖನೌ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಜಿಲ್ಲೆಯ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲ್‌ಪುರ ಗ್ರಾಮದಲ್ಲಿ ಯುವಕನೊಬ್ಬ ತನ್ನ ನಾಲ್ವರು ಸಂಬಂಧಿಕರು ಹಾಗೂ ಸ್ನೇಹಿತನೋರ್ವನನ್ನು ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಥಮ ಮಾಹಿತಿ ಪ್ರಕಾರ, ಕಿಶ್ನಿ ಗ್ರಾಮದ ನಿವಾಸಿ ಸುಭಾಷ್ ಅವರ ಪುತ್ರ ಆರೋಪಿ ಶಿವವೀರ್ ನೋಯ್ಡಾದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದಾನೆ. ಶುಕ್ರವಾರ ಆತನ ಕಿರಿಯ ಸಹೋದರ ಸೋನು ಅವರ ಮದುವೆಯ ಮೆರವಣಿಗೆಯು ಇಟಾವಾದಿಂದ ಹಿಂತಿರುಗಿತ್ತು. ರಾತ್ರಿ ಸೋನು ತನ್ನ ಹೊಸದಾಗಿ ಮದುವೆಯಾದ ಪತ್ನಿ ಸೋನಿಯೊಂದಿಗೆ ಮನೆಯ ಟೆರೇಸ್ ಮೇಲೆ ಮಲಗಿದ್ದನು. ಕಿರಿಯ ಸಹೋದರ ಭುಲ್ಲನ್, ಸಹೋದರನ ಸ್ನೇಹಿತ ಫಿರೋಜಾಬಾದ್ ನಿವಾಸಿ ದೀಪಕ್, ಹವೇಲಿಯಾ ಸೋದರ ಮಾವ ಸೌರಭ್ ಮತ್ತು ಇತರ ಸಂಬಂಧಿಕರು ಕೆಳ ಮಹಡಿಯಲ್ಲಿ ಮಲಗಿದ್ದರು.

ರಾತ್ರಿ ಸುಮಾರು 11 ಗಂಟೆಯವರೆಗೂ ಮನೆಯಲ್ಲಿ ಹಾಡು, ಕುಣಿತದ ಕಾರ್ಯಕ್ರಮ ನಡೆದಿತ್ತು. ನಂತರ ಎಲ್ಲರೂ ನಿದ್ರೆಗೆ ಜಾರಿದ್ದಾರೆ. ಶಿವವೀರ್ ರಾತ್ರಿ 3 ಗಂಟೆ ಸುಮಾರಿಗೆ ಮೊದಲು ಟೆರೇಸ್‌ಗೆ ಬಂದು ಮಲಗಿದ್ದ ಸೋನು ಮತ್ತು ಅವರ ಪತ್ನಿ ಸೋನಿ ಅವರನ್ನು ಕಠಾರಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಸಹೋದರ ಭುಲ್ಲನ್, ಸಹೋದರನ ಸ್ನೇಹಿತ ದೀಪಕ್, ಸೋದರಮಾವ ಸೌರಭ್ ಅವರನ್ನೂ ಕೊಲೆ ಮಾಡಲಾಗಿದೆ.

ಇದಾದ ಬಳಿಕ ತನ್ನ ಪತ್ನಿ ಡಾಲಿ ಹಾಗೂ ತಂದೆ ಸುಭಾಷ್ ಚಂದ್ರ ಅವರಿಗೆ ಸುತ್ತಿಗೆಯಿಂದ ಹೊಡೆದು ಗಾಯಗೊಳಿಸಿದ್ದಾನೆ. ಕಿರುಚಾಟ ಕೇಳಿದ ಸಂಬಂಧಿಕರು ಆತನನ್ನು ಹಿಡಿಯಲು ಯತ್ನಿಸಿದ್ದು, ನಂತರ ಮನೆಯ ಹಿಂಭಾಗಕ್ಕೆ ಓಡಿ ಬಂದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಕುಟುಂಬ ಸಮೇತರಾಗಿ ಗ್ರಾಮದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಘಟನೆಯ ಸುದ್ದಿ ತಿಳಿದು ಶನಿವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಇತರೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಅಮಾನುಷ ಘಟನೆಯ ಸುದ್ದಿ ತಿಳಿದ ತಕ್ಷಣ ಎಡಿಜಿ ರಾಜೀವ್ ಕೃಷ್ಣ ಮತ್ತು ಐಜಿ ದೀಪಕ್ ಕುಮಾರ್ ಕಿಶ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಪುರ ಗ್ರಾಮದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.