ಅಕ್ರಮ ಮುಸ್ಲಿಂ ವಲಸಿಗರನ್ನು ದೇಶದಿಂದ ಓಡಿಸುತ್ತೇವೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಎಲ್ಲಾ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ರಾಜ್ಯದಿಂದ ವಾಪಸ್ ಕಳುಹಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಗತ್ಯ ಕ್ರಮಗಳ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.

ಪಾಟ್ನಾ: ಎಲ್ಲಾ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ರಾಜ್ಯದಿಂದ ವಾಪಸ್ ಕಳುಹಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಗತ್ಯ ಕ್ರಮಗಳ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.
ಬೇಗುಸರಾಯ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಗಿರಿರಾಜ್ ಸಿಂಗ್ ಅವರು ಉತ್ತರಿಸಿದರು. ಈ ವೇಳೆ ಅಕ್ರಮ ಮುಸ್ಲಿಂ ವಲಸಿಕರನ್ನು ದೇಶದಿಂದ ಓಡಿಸಬೇಕಿದೆ ಎಂದು ಹೇಳಿದರು.
ಅಕ್ರಮ ಮುಸ್ಲಿಂ ವಲಸಿಗರ ಓಡಿಸಲುವಲ್ಲಿ ನಿತೀಶ್ ಸರ್ಕಾರ ವಿಫಲವಾಗಿದ್ದೇ ಆದರೆ, ಮುಂದಿನ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿ, ಸರ್ಕಾರ ರಚಿಸಿದ್ದೇ ಆದರೆ, ರಾಜ್ಯದಲ್ಲಿ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರ ವಾಪಸಾತಿಗೆ ಕ್ರಮಗಳ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಾಂಗ್ಲಾದೇಶದ ದಂಗೆಕೋರರನ್ನು ಮತ ಬ್ಯಾಂಕ್ ರಾಜಕಾರಣದಿಂದ ನೋಡಬಾರದು, ಏಕೆಂದರೆ ದೇಶದಲ್ಲಿ ಈಗಾಗಲೇ ಬಹುಸಂಖ್ಯೆಯ ಜನರಿದ್ದಾರೆ. ನಿತೀಶ್ ಅವರು ಎಲ್ಲಾ ಅಕ್ರಮ ಮುಸ್ಲಿಂ ವಲಸಿಗರ ಗುರ್ತಿಸಬೇಕು ಹಾಗೂ ಅವರನ್ನು ರಾಜ್ಯದಿಂದ ವಾಪಸು ಕಳುಹಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ಗೋಡ್ಸೆ ದೇಶದ 'ಮಗ', ಔರಂಗಜೇಬ್ನಂತೆ ದಾಳಿಕೋರನಲ್ಲ: ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿರುಗೇಟು
ಈ ಹಿಂದೆ ಕೂಡ ಇದೇ ರೀತಿಯ ಹೇಳಿಕೆಯನ್ನು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ನೀಡಿದ್ದರು. ಎಲ್ಲಾ ಬಾಂಗ್ಲಾದೇಶಿ ಬಂಡುಕೋರರನ್ನು ಗುರುತಿಸಿ, ಅವರನ್ನು ಬಿಹಾರದಿಂದ ಹೊರಹಾಕಲಾಗುವುದು ಎಂದು ಹೇಳಿದ್ದರು.
ನೇಪಾಳದ ಗಡಿಯಲ್ಲಿರುವ ರಾಜ್ಯದ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ನುಸುಳುಕೋರರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಬಿಜೆಪಿ ಆರೋಪಿಸುತ್ತಲೇ ಇದೆ.
ಶುಕ್ರವಾರ ಕೂಡ ಗಿರಿರಾಜ್ ಸಿಂಗ್ ಅವರು, ಗೋಡ್ಸೆ ಗಾಂಧಿಯ ಹಂತಕನಾಗಿದ್ದರೂ ಅವನೂ ಈ ದೇಶದ ಮಗ. ಅವರು ಭಾರತದಲ್ಲಿ ಜನಿಸಿದ್ದು ಔರಂಗಜೇಬ್ ಮತ್ತು ಬಾಬರ್ ನಂತೆ ಆಕ್ರಮಣಕಾರನಲ್ಲ. ಬಾಬರನ ಮಗ ಎಂದು ಯಾರು ಸಂತೋಷ ಪಡುತ್ತಾರೋ ಆ ವ್ಯಕ್ತಿ ಭಾರತ ಮಾತೆಯ ಮಗನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


