ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿ ಜಾರಿಯಾಗುವ ಸಾಧ್ಯತೆ
ರಾಜ್ಯ ಸರಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಯಾಗುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವಾಲಯ ಸೋಮವಾರ ತಿಳಿಸಿದೆ

ನವದೆಹಲಿ: ರಾಜ್ಯ ಸರಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಯಾಗುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವಾಲಯ ಸೋಮವಾರ ತಿಳಿಸಿದೆ. ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರೀಕ್ಷಿತ ದಿನಾಂಕವನ್ನು ತಿಳಿಸಲಾಯಿತು.
ಮಾಜಿ ಸಚಿವ ಸುರೇಶ್ ಪ್ರಭು ನೇತೃತ್ವದ 49 ಸದಸ್ಯರ ಸಮಿತಿ ಹೊಸ ರಾಷ್ಟ್ರೀಯ ಸಹಕಾರ ನೀತಿಯ ಕರಡನ್ನು ಪ್ರಮುಖ ಶಿಫಾರಸುಗಳೊಂದಿಗೆ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿದೆ, ಅವರು ಪರಿಷ್ಕೃತ ಕರಡು ಸಿದ್ಧಪಡಿಸುವ ಆಧಾರದ ಮೇಲೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ.
ರಚನಾತ್ಮಕ ಸುಧಾರಣೆಗಳು ಮತ್ತು ಆಡಳಿತ, ಸಹಕಾರಿ ಸಂಸ್ಥೆಗಳ ಆರ್ಥಿಕ ಚೈತನ್ಯ, ಬಂಡವಾಳ ಮತ್ತು ನಿಧಿಯ ಮೂಲಗಳು ಸೇರಿದಂತೆ ವಿವಿಧ ವಲಯಗಳಲ್ಲಿನ ಪ್ರಮುಖ ಶಿಫಾರಸುಗಳ ಜೊತೆಗೆ ಆದ್ಯತೆಯ ವಿಭಾಗಗಳು, ತಂತ್ರಜ್ಞಾನದ ಬಳಕೆ, ಕೌಶಲ್ಯ ಮತ್ತು ತರಬೇತಿ, ಸುಸ್ಥಿರತೆ ಮತ್ತು ಅನುಷ್ಠಾನ ಯೋಜನೆ ಒಳಗೊಂಡಂತೆ ಕರಡು ನೀತಿಯ ಉದ್ದೇಶಗಳು, ದೂರದೃಷ್ಟಿ ಮತ್ತು ಧ್ಯೇಯಗಳ ಬಗ್ಗೆ ಸಮಿತಿಯ ಸದಸ್ಯರು ಶಾ ಅವರಿಗೆ ವಿವರಿಸಿದ್ದಾರೆ.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಸಹಕಾರ ದಿಂದ ಸಮೃದ್ಧಿ ದೂರದೃಷ್ಟಿಯನ್ನು ಹೇಗೆ ಸಾಕಾರಗೊಳಿಸಬೇಕು ಮತ್ತು ಹೊಸ ನೀತಿಯ ಮೂಲಕ ತಳಮಟ್ಟದಲ್ಲಿ ಸಹಕಾರ ಚಳವಳಿಯನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಅಮಿತ್ ಶಾ ಮಾರ್ಗದರ್ಶನ ನೀಡಿದರು.
"ಸಹಕಾರ ಸಚಿವರಿಂದ ಪಡೆದ ಮಾರ್ಗದರ್ಶನದ ಪ್ರಕಾರ, ಸಮಿತಿಯು ಪರಿಷ್ಕೃತ ಕರಡನ್ನು ಸಿದ್ಧಪಡಿಸುತ್ತದೆ. ಹೊಸ ಸಹಕಾರ ನೀತಿಯನ್ನು ಜುಲೈ 2023 ರಲ್ಲಿ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಮತ್ತು ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


