ಸಾಕ್ಷಿ ಹತ್ಯೆಯ ಭೀಕರತೆಯನ್ನು ತೆರೆದಿಟ್ಟ ಶವಪರೀಕ್ಷೆ ವರದಿ
ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪ್ರಾಪ್ತ ಬಾಲಕಿ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು, ಘಟನೆಯ ಭೀಕರತೆಯನ್ನು ತೆರೆದಿಟ್ಟಿದೆ.

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪ್ರಾಪ್ತ ಬಾಲಕಿ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು, ಘಟನೆಯ ಭೀಕರತೆಯನ್ನು ತೆರೆದಿಟ್ಟಿದೆ.
ಶಾಬಾದ್ ಡೈರಿ ಪ್ರದೇಶದಲ್ಲಿ ಮೇ.28 ರಂದು ಆರೋಪಿ ಸಾಹಿಲ್ ಎಂಬ ವ್ಯಕ್ತಿ ಸಾಕ್ಷಿ ಎಂಬ ಅಪ್ರಾಪ್ತ ಬಾಲಕಿಯ ಹೊಟ್ಟೆಗೆ 16 ಬಾರಿ ಇರಿದು ಹತ್ಯೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸಾಕ್ಷಿಯ ಒಳಾಂಗಗಳು ಹೊಟ್ಟೆ ಭಾಗದಿಂದ ಹೊರಬಂದು ಜೋತಾಡುತ್ತಿದ್ದವು ಎಂಬ ಅಂಶ ಬಹಿರಂಗವಾಗಿದೆ.
ಪೊಲೀಸರು ಆಸ್ಪತ್ರೆಯಿಂದ 16-17 ಪುಟಗಳಷ್ಟು ಚಾರ್ಜ್ ಶೀಟ್ ನ್ನು ಪಡೆದಿದ್ದು, ಇದರಲ್ಲಿ ಕೊಲೆಯ ಭೀಕರ ವಿವರಗಳನ್ನು ವಿವರಿಸಲಾಗಿದೆ. ಆರೋಪಿ ಸಾಹಿಲ್ ಆಕೆಗೆ ಹಲವು ಬಾರಿ ಇರಿದಿದ್ದಾನೆ ಮತ್ತು ನಂತರ ಆಕೆಯ ತಲೆಯನ್ನು ಕಲ್ಲು ಬಂಡೆಯಿಂದ ಜಜ್ಜಿದ್ದಾನೆ ಎಂದು ವರದಿ ಬಹಿರಂಗಪಡಿಸಿದೆ.
ಸಂತ್ರಸ್ತೆಯ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದು ತಲೆ ಪ್ರದೇಶದಲ್ಲಿ ಕೆಲವು ಮೂಳೆಗಳಲ್ಲಿ ಬಿರುಕುಗಳು ಮತ್ತು ಗಾಯಗಳು ಕಂಡುಬಂದಿವೆ.
ದೇಹದಲ್ಲಿರುವ 16 ಇರಿತದ ಗಾಯಗಳ ಪೈಕಿ ಗರಿಷ್ಠ ಗಾಯಗಳು ಸೊಂಟದ ಪ್ರದೇಶದಲ್ಲಿದ್ದು, ದೇಹದ ಹಲವು ಮೂಳೆಗಳು ಮುರಿದಿದ್ದು ಹತ್ಯೆಯ ಭೀಕರತೆಯನ್ನು ತೋರಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


