ಇಂಡಿಯಾ ಎಂಬುದು, ವಸಾಹತುಶಾಹಿ ಗುಲಾಮಗಿರಿ ಸಂಕೇತ; ಭಾರತಕ್ಕೆ ಆ ಹೆಸರು ಬೇಡ: ಬಿಜೆಪಿ ಸಂಸದ
ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.

ದೆಹಲಿ: ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.
ಶುಕ್ರವಾರ ರಾಜ್ಯಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಎಂಬುದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಪ್ರಖರತೆ ಪಡೆದುಕೊಂಡು ಹೆಸರಾಗಿದೆ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಸಹಸ್ರಾರು ವರ್ಷಗಳಿಂದ ಇದೆ. ಇಂಡಿಯಾವನ್ನು ಅಧಿಕೃತವಾಗಿ ಭಾರತ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನರೇಶ್ ಬನ್ಸಾಲ್ ಅವರು ಉತ್ತರಾಖಂಡ ರಾಜ್ಯದಿಂದ ರಾಜ್ಯಸಭೆ ಸಂಸದರಾಗಿದ್ದು, ಅಲ್ಲಿನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಇಂಡಿಯಾ ಎಂಬ ಹೆಸರು ಗುಲಾಮಗಿರಿಯ ಸಂಕೇತವೇ ಹೊರತು ಮತ್ತೇನೂ ಎಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂಡಿಯಾವನ್ನು ತೆಗೆದುಹಾಕಿ ಭಾರತ ಎಂದು ಪುನರ್ನಾಮಕರಣ ಮಾಡುವುದು ಮಹತ್ವದ ಮೈಲುಗಲ್ಲಾಗುತ್ತದೆ. ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ’ ಎಂದು ಬನ್ಸಾಲ್ ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


