ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನದಲ್ಲಿ ಹಠಾತ್ ಬೆಂಕಿ, ವಿಡಿಯೋ!
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಜಿನ್ ನಿರ್ವಹಣೆ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯ ಕುರಿತು, ವಿಮಾನ ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕಂಪನಿ ಹೇಳಿದೆ.

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಜಿನ್ ನಿರ್ವಹಣೆ ಕಾರ್ಯದ ವೇಳೆ ಸ್ಪೈಸ್ ಜೆಟ್ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯ ಕುರಿತು, ವಿಮಾನ ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕಂಪನಿ ಹೇಳಿದೆ.
ಸ್ಪೈಸ್ ಜೆಟ್ ವಕ್ತಾರರು, ಕ್ಯೂ400 ವಿಮಾನವು ನಿರ್ವಹಣೆಗಾಗಿ ಗ್ರೌಂಡ್ ಮಾಡಿದಾಗ ಇಂಜಿನ್ ಬೆಂಕಿಯ ಬಗ್ಗೆ ಫೈರ್ ಅಲಾರ್ಮ್ ಸಿಸ್ಟಮ್ ಮೂಲಕ ರಾತ್ರಿ 8 ಗಂಟೆಗೆ ಕರೆ ಸ್ವೀಕರಿಸಲಾಗಿದೆ ಎಂದು ಹೇಳಿದರು. ಸ್ಥಳದಲ್ಲಿ ಲಭ್ಯವಿದ್ದ ಅಗ್ನಿಶಾಮಕ ಉಪಕರಣಗಳಿಂದ ಬೆಂಕಿಯನ್ನು ನಂದಿಸಲಾಗಿದೆ ಎಂದು ಅವರು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳವನ್ನೂ ಕರೆಯಲಾಗಿದ್ದು, ಘಟನೆಯಲ್ಲಿ ವಿಮಾನ ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಏರ್‌ಲೈನ್ಸ್ ಪ್ರಕಾರ, ಈ ಘಟನೆ ವೇಳೆ Q400 ವಿಮಾನದಲ್ಲಿ 78 ರಿಂದ 90 ಪ್ರಯಾಣಿಕರು ಕುಳಿತ್ತಿದ್ದರು.
ಇದನ್ನೂ ಓದಿ: ಕಾಂಡ್ಲಾ ಮಾರ್ಗದ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಸ್ಪೈಸ್‌ಜೆಟ್ ವಿಮಾನಯಾನವನ್ನು ಕಠಿಣ ಕಣ್ಗಾವಲು ಆಡಳಿತದ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಅಲ್ಲದೆ ವಿಮಾನಯಾನ ವಾಚ್‌ಡಾಗ್‌ನಿಂದ ವಿಮಾನಯಾನವನ್ನು ಕಟ್ಟುನಿಟ್ಟಾದ ಕಣ್ಗಾವಲು ಇರಿಸಲಾಗಿದೆ. ಕಳೆದ ಮಾನ್ಸೂನ್ ಋತುವಿನಲ್ಲಿನ ಘಟನೆಗಳು ಮತ್ತು ಅಸಮರ್ಪಕ ನಿರ್ವಹಣೆಯ ಬಗ್ಗೆ ಹಿಂದಿನ ಅವಲೋಕನಗಳಿಂದ ಕಣ್ಗಾವಲು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಈ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, DGCA ಭಾರತದಾದ್ಯಂತ 11 ಸ್ಥಳಗಳಲ್ಲಿ 51 ಸ್ಪಾಟ್ ಚೆಕ್ಗಳನ್ನು ನಡೆಸಿತು. ನಿರ್ದಿಷ್ಟವಾಗಿ ಬೋಯಿಂಗ್ 737 ಮತ್ತು ಬೊಂಬಾರ್ಡಿಯರ್ DHC Q-400 ಫ್ಲೀಟ್ಗಳನ್ನು ಗುರಿಯಾಗಿಟ್ಟುಕೊಂಡು, ಒಟ್ಟು 23 ವಿಮಾನ ತಪಾಸಣೆಗಳನ್ನು ನಡೆಸಿತು ಎಂದು ಅಧಿಕಾರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


