ಮಣಿಪುರದಲ್ಲಿನ ಹೀನ ಕೃತ್ಯ ನಡೆದ ಬಗ್ಗೆ ಎನ್ ಸಿಡಬ್ಲ್ಯುಗೆ ತಿಂಗಳ ಹಿಂದೆಯೇ ಇತ್ತು ಮಾಹಿತಿ?!
ಮಣಿಪುರದಲ್ಲಿ ಮಹಿಳೆಯರ ಮೇಲಿನ ಹೀನ ಕೃತ್ಯ ನಡೆದ ವೀಡಿಯೋ ವೈರಲ್ ಆಗುವುದಕ್ಕೂ ಮುನ್ನ, ಘಟನೆ ನಡೆದ ಬಗ್ಗೆ ಮಹಿಳಾ ಆಯೋಗಕ್ಕೆ ಮಾಹಿತಿ ಇತ್ತು ಎಂಬ ಅಂಶ ಈಗ ಬಹಿರಂಗವಾಗಿದೆ.

ನವದೆಹಲಿ: ಮಣಿಪುರದಲ್ಲಿ ಮಹಿಳೆಯರ ಮೇಲಿನ ಹೀನ ಕೃತ್ಯ ನಡೆದ ವೀಡಿಯೋ ವೈರಲ್ ಆಗುವುದಕ್ಕೂ ಮುನ್ನ, ಘಟನೆ ನಡೆದ ಬಗ್ಗೆ ಮಹಿಳಾ ಆಯೋಗಕ್ಕೆ ಮಾಹಿತಿ ಇತ್ತು ಎಂಬ ಅಂಶ ಈಗ ಬಹಿರಂಗವಾಗಿದೆ.
ಸಾಮಾಜಿಕ ಕಾರ್ಯಕರ್ತರು ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದ ಪ್ರಕರಣವನ್ನು ರಾಷ್ಟ್ರಿಯ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ್ದರು.
ರಾಜ್ಯಕ್ಕೆ ಭೇಟಿ ನೀಡಿದ್ದ ಇಬ್ಬರು ಕಾರ್ಯಕರ್ತರು ಹಾಗೂ ಉತ್ತರ ಅಮೇರಿಕನ್ ಮಣಿಪುರ ಬುಡಕಟ್ಟು ಅಸೋಸಿಯೇಷನ್ ನವರು ಜೂ.12 ರಂದೇ ಮಣಿಪುರದಲ್ಲಿನ ಘಟನೆ ಬಗ್ಗೆ ಎನ್ ಸಿ ಡಬ್ಲ್ಯು ರೇಖಾ ಶರ್ಮಾ ಅವರಿಗೆ ಪತ್ರ ಬರೆದು ವಿವರಿಸಿದ್ದರು. ಆದರೆ ಎನ್ ಸಿಡಬ್ಲ್ಯು ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೇ.04 ರಂದು ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಥಳಿಸಿ, ಸಾರ್ವಜನಿಕವಾಗಿ, ಸಾಮೂಹಿಕ ಅತ್ಯಾಚಾರವೆಸಗಲಗಿತ್ತು.
ಇದನ್ನೂ ಓದಿ: ಮಣಿಪುರ ವೀಡಿಯೋ: ಮುಖ್ಯ ಆರೋಪಿಯ ಬಂಧನ; ಮೇ, ಜೂನ್ ನಲ್ಲೆ ಪ್ರತ್ಯೇಕ ಎಫ್ಐಆರ್ ಹಾಕಲಾಗಿತ್ತು!
ಈ ದೃಶ್ಯಗಳಿಗೆ ರಾಜ್ಯ ಪೊಲೀಸ್ ಕಮಾಂಡೋಗಳೂ ಮೂಕಪ್ರೇಕ್ಷಕರಾಗಿದ್ದರು, ಥಳಿತ, ಮನೆಗಳಿಗೆ ಬೆಂಕಿ ಇಡುವ ದೃಶ್ಯಗಳಿಗೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿದ್ದರು ಎಂದು ರೇಖಾ ಶರ್ಮಾ ಅವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಆದರೆ ಎನ್ ಸಿಡಬ್ಲ್ಯು ಮುಖ್ಯಸ್ಥರಾಗಿರುವ ರೇಖಾ ಶರ್ಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜು.19 ರಂದು ಎನ್ ಸಿಡಬ್ಲ್ಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಣಿಪುರದ ಅಧಿಕಾರಿಗಳನ್ನು ಸಂಪರ್ಕಿಸಿತ್ತು ಆದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಕಾರ್ಯಕರ್ತರು ಮಣಿಪುರದ ಘಟನೆಯ ಬಗ್ಗೆ ದೂರು ನೀಡಿದ್ದನ್ನು ರೇಖಾ ಶರ್ಮಾ ಪಿಟಿಐ ಗೆ ನೀಡಿರುವ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


