ರಾಷ್ಟ್ರ ರಾಜಧಾನಿಯಲ್ಲಿ ನಾಳೆಯೂ ಭಾರಿ ಮಳೆ: 'ಯೆಲ್ಲೂ' ಆಲರ್ಟ್ ಘೋಷಣೆ
ರಾಷ್ಟ್ರ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ನಾಳೆಯೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೂ ಆಲರ್ಟ್ ಘೋಷಿಸಿದೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ನಾಳೆಯೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೂ ಆಲರ್ಟ್ ಘೋಷಿಸಿದೆ.
ಲಕ್ಷ್ಮೀನಗರ, ಅಯನಗರ, ಲೊದಿ ರಸ್ತೆ, ಮುಂಗೇಶ್ಪರ್ ಮತ್ತಿತರ ಕಡೆಗಳಲ್ಲಿ ಶುಕ್ರವಾರ ಹಗುರ ಮಳೆಯಾಗಿದೆ. ಲುಟಿಯನ್ಸ್‌ನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಪ್ರದೇಶಗಳಲ್ಲಿ ಲಘು ಪ್ರಮಾಣದ ತುಂತುರು ಮಳೆಯಾಗಿದೆ.
ನಾಳೆ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು,ಮುನ್ಸೂಚನೆಯಂತೆ ಯೆಲ್ಲೂ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮಳೆ ಪ್ರಮಾಣ ತಿಳಿಸಲು ಭಾರತೀಯ ಹವಾಮಾನ ಇಲಾಖೆ ಬಣ್ಣದ ಕೋಡ್ ಬಳಸುತ್ತದೆ. ಗ್ರೀನ್ ಆಲರ್ಟ್ ಎಂದರೆ ಎಲ್ಲವೂ ಚೆನ್ನಾಗಿದೆ ಎಂಬರ್ಥ ಆದರೆ ಯೆಲ್ಲೂ ಆಲರ್ಟ್ ಎಂದು ತೀವ್ರ ಕೆಟ್ಟ ಹವಾಮಾನವನ್ನು ಸೂಚಿಸುತ್ತದೆ.
ಯೆಲ್ಲೂ ಆಲರ್ಟ್ ಹವಾಮಾನವು ಕೆಟ್ಟದಾಗಿ ಬದಲಾಗಿ,ದೈನಂದಿನ ಚಟುವಟಿಕೆಗಳನ್ನು ಅಡ್ಡಿಪಡಿಸುತ್ತದೆ ಎಂದು ಅದು ಸೂಚಿಸುತ್ತದೆ. ರಸ್ತೆ ಮತ್ತು ಚರಂಡಿ ಬಂದ್, ವಿದ್ಯುತ್ ಸರಬರಾಜಿನ ಅಡಚಣೆಯೊಂದಿಗೆ ಅತ್ಯಂತ ಕೆಟ್ಟ ಹವಾಮಾನದ ಎಚ್ಚರಿಕೆಯಾಗಿ ಈ ರೀತಿಯ ಮುನ್ಸೂಚನೆ ನೀಡಲಾಗುತ್ತದೆ. ಹವಾಮಾನವು ಜೀವಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡಿದಾಗ 'ರೆಡ್ ಆಲರ್ಟ್' ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


